ಕರ್ನಾಟಕ

karnataka

ETV Bharat / state

ಸೀಡಿ ಇದ್ರೆ ಬಿಡುಗಡೆ ಮಾಡಯ್ಯ ಸವದಿ... ಡಿಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು - ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ರಥೋತ್ಸವ

ಮೋದಿ ಮೋದಿ ಅಂತ ಕೂಗುವುದನ್ನು ಆರ್‌ಎಸ್ಎಸ್ ನವರು ಫ್ಯಾಷನ್ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Savadi release CD if any there: Siddaramiah taunts DCM
ಸೀಡಿ ಇದ್ರೆ ಬಿಡುಗಡೆ ಮಾಡಯ್ಯ ಸವದಿ: ಡಿಸಿಎಂ ಕಾಲೆಳೆದ ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jan 13, 2020, 4:55 AM IST

ಕೊಪ್ಪಳ:ಮೋದಿ- ಮೋದಿ ಅಂತ ಕೂಗುವುದನ್ನು ಆರ್‌ಎಸ್ಎಸ್​ನವರು ಫ್ಯಾಷನ್ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ಬಸಾಪುರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರೋಡ್ರೋಮ್​ಗೆ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರವಿಲ್ಲ ಅಂತ ನನಗೆ ಭ್ರಮ‌ನಿರಸನ ಆಗಿಲ್ಲ. ಕೆಲವರಿಗೆ ರಾಜಕೀಯ ಗಂಧಗಾಳಿ ಇಲ್ಲ. ಇದು ಭಟ್ಟಂಗಿತನ. ಬ್ಲೂ ಫಿಲಂ ನೋಡುವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಪರೋಕ್ಷವಾಗಿ ಡಿಸಿಎಂ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.

ಬೇಜವಾಬ್ದಾರಿ ಹೇಳಿಕೆ ಕೊಡುವವರಿಗೆ ಉತ್ತರ ಕೊಡಬಾರದು. ಕೊಳಕು ಅಂದ್ರೆ ಏನು? ಆಡಳಿತಾರೂಢ ಸರ್ಕಾರದ ತಪ್ಪುಗಳನ್ನು ತೋರಿಸಿದ್ರೆ ತಪ್ಪಾ? ತಪ್ಪುಗಳನ್ನೇ ಹೇಳದೆ ಮುತ್ತು‌ ಕೊಡಬೇಕಾ? ಸೀಡಿ ಇದ್ರೆ ಬಿಡುಗಡೆ ಮಾಡಯ್ಯ ಸವದಿ ಎಂದು ಸಿದ್ದರಾಮಯ್ಯ ಅವರು ಡಿಸಿಎಂ ಅವರಿಗೆ ಸವಾಲು ಹಾಕಿದರು.

ABOUT THE AUTHOR

...view details