ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ ದೆಹಲಿಗೆ ಹೋದ್ರೆ ನಾವೇನ್ ಮಾಡಬೇಕು: ಸತೀಶ್​ ಜಾರಕಿಹೊಳಿ ಪ್ರಶ್ನೆ - ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಬಿಜೆಪಿ ಸರ್ಕಾರ ನಮ್ಮ ಸಮುದಾಯವನ್ನು ಕಡೆಗಣನೆ ಮಾಡಿದೆ. ಮುಂದಿನ ಬಾರಿ ನಮ್ಮದೇ ಸರ್ಕಾರ ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

sathish-jarakiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

By

Published : Feb 2, 2022, 5:06 PM IST

ಕೊಪ್ಪಳ: ನಮ್ಮಲ್ಲಿ ಯಾವ ಬಣವೂ ಇಲ್ಲ, ಕಾಂಗ್ರೆಸ್ ಒಂದೇ ಬಣ. ನಮ್ಮದು ಸಾಮೂಹಿಕ ನಾಯಕತ್ವ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಬಿಟ್ಟು ಇನ್ನು ನಾಲ್ಕೈದು ಜನ ನಾಯಕರಿದ್ದಾರೆ. ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಬಿಟ್ಟು ಇನ್ನೂ ತುಂಬಾ ಜನ ನಾಯಕರು ಕಾಂಗ್ರೆಸ್​ನಲ್ಲಿದ್ದಾರೆ ಎಂದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಿಜೆಪಿ ಸರ್ಕಾರ ನಮ್ಮ ಸಮುದಾಯವನ್ನು ಕಡೆಗಣನೆ ಮಾಡಿದೆ. ಮುಂದಿನ ಬಾರಿ ನಮ್ಮದೇ ಸರ್ಕಾರ ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಯಾರು ಬರ್ತಾರೆ ಅನ್ನೋದು ಮುಂದಿನ ದಿನದಲ್ಲಿ ನಿರ್ಧಾರವಾಗುತ್ತದೆ. ತಕ್ಷಣ ಏನೂ ಹೇಳೋಕೆ ಆಗುವುದಿಲ್ಲ ಎಂದ ಅವರು, ರಮೇಶ್ ಜಾರಕಿಹೊಳಿ ದೆಹಲಿಗೆ ಹೋದ್ರೆ ನಾವೇನ್ ಮಾಡಬೇಕು? ಎಂದು ಪ್ರಶ್ನಿಸಿದರು.

ಓದಿ:ಫೆ.14ರಂದು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವೆ : ಸಿಎಂ ಇಬ್ರಾಹಿಂ

For All Latest Updates

TAGGED:

ABOUT THE AUTHOR

...view details