ಕರ್ನಾಟಕ

karnataka

ETV Bharat / state

ಬಿ.ವೈ ವಿಜಯೇಂದ್ರ ಆಪ್ತ ಶರಣು ತಳ್ಳಿಕೇರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ..! - Sharanu tallikere

ಬಿಜೆಪಿ ರಾಜ್ಯ ಉಪಾಧ್ಯಕ್ಷ,ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಆಪ್ತ ಶರಣು ತಳ್ಳಿಕೇರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

dsds
ಬಿ.ವೈ ವಿಜಯೇಂದ್ರ ಆಪ್ತ ಶರಣು ತಳ್ಳಿಕೇರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

By

Published : Nov 25, 2020, 11:42 AM IST

ಕೊಪ್ಪಳ: ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಪ್ತ ಜಿಲ್ಲೆಯ ಬಿಜೆಪಿ ಮುಖಂಡ ಶರಣು ತಳ್ಳಿಕೇರಿಯನ್ನು ನೇಮಕ ಮಾಡಲಾಗಿದೆ.

ಬಿ.ವೈ ವಿಜಯೇಂದ್ರ ಆಪ್ತ ಶರಣು ತಳ್ಳಿಕೇರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಶರಣು ತಳ್ಳಿಕೇರಿ ಇತ್ತೀಚೆಗೆ ನಡೆದ ಶಿರಾ ಉಪಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಟೀಂ ಜೊತೆ ಕೆಲಸ ಮಾಡಿದ್ದರು. ಈ ಹಿನ್ನೆಲೆ ಶರಣು ತಳ್ಳಿಕೇರಿಗೆ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡಿದೆ.

ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ, ಕುಷ್ಟಗಿ ತಾ.ಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಶರಣು ತಳ್ಳಿಕೇರಿಗೆ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ನಿಗಮ ಮಂಡಳಿಯ ಹುದ್ದೆ ದೊರಕಿದಂತಾಗಿದೆ.

ABOUT THE AUTHOR

...view details