ಕರ್ನಾಟಕ

karnataka

ETV Bharat / state

ಬೆಟಗೇರಿ ಗ್ರಾಮಸ್ಥರಿಗೆ ಅಳಿಲು ಸೇವೆ ಮಾಡುತ್ತಿದೆ ಸಂಜೀವಿನಿ ಯೂಥ್ ಬ್ರಿಗೇಡ್​ - Koppala

ಸುಮಾರು 1100ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಕಾರ್ಡ್ ಮಾಡಿಸಿ, ತಾವೇ ಖುದ್ದಾಗಿ ಮನೆ ಮನೆಗೆ ತೆರಳಿ ಹಂಚಿಕೆ ಮಾಡಿದ್ದಾರೆ. ಯುವಕರು ಮಾಡುತ್ತಿರುವ ಈ ಕಾರ್ಯದಿಂದ ಬಹಳಷ್ಟು ಜನರಿಗೆ ತುಂಬಾ ಅನುಕೂಲವಾಗಿದೆ..

ಸಂಜೀವಿನಿ ಯೂಥ್ ಬ್ರಿಗೇಡ್ ನಿರ್ಮಿಸಿದ ಬಸ್​ ಶೆಡ್​ ​
ಸಂಜೀವಿನಿ ಯೂಥ್ ಬ್ರಿಗೇಡ್ ನಿರ್ಮಿಸಿದ ಬಸ್​ ಶೆಡ್​ ​

By

Published : Aug 31, 2020, 5:00 PM IST

ಕೊಪ್ಪಳ :ಬೆಟಗೇರಿ ಗ್ರಾಮದಲ್ಲಿರುವ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿ ಹಂಚಿ ಜನರ ಮೆಚ್ಚುಗೆಗೆ ಇಲ್ಲಿನ ಸಂಜೀವಿನಿ ಯೂಥ್ ಬ್ರಿಗೇಡ್​ನ ವಿದ್ಯಾರ್ಥಿಗಳು ಪಾತ್ರರಾಗಿದ್ದಾರೆ.

ಲಾಕ್​ಡೌನ್​ ವೇಳೆ ಜನೋಪಯೋಗಿ ಕಾರ್ಯ ಮಾಡಬೇಕು ಎಂದು ಯೋಚಿಸಿದ ಯುವಕರ ತಂಡ ಬಸ್​ ಶೆಡ್​ ನಿರ್ಮಿಸಿದ್ದಾರೆ. ಆ ಬಳಿಕ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿ ಹಂಚಿದ್ದಾರೆ. ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ್ ಭಾರತ ಕಾರ್ಡ್ ಈಗ ಅತ್ಯಂತ ಮುಖ್ಯ. ಈ ಕಾರ್ಡ್ ಮಾಡಿಸಬೇಕೆಂದರೆ ತುಸು ಓಡಾಡಬೇಕು. ಎಲ್ಲರಿಗೂ ಓಡಾಡಿ ಈ ಕಾರ್ಡ್ ಮಾಡಿಸಲು ಆಗುವುದಿಲ್ಲ.

ಗ್ರಾಮದ ಬಹಳಷ್ಟು ಜನರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿರಲಿಲ್ಲ. ಹೀಗಾಗಿ ಈ ಯುವಕರು ಗ್ರಾಮದ ಅರ್ಹರೆಲ್ಲರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸುವ ನಿರ್ಧಾರಕೈಗೊಂಡು ಓರ್ವರಿಂದ ಕೇವಲ 15 ರೂ. ಪಡೆದುಕೊಂಡು ಉಳಿದ ಹಣವನ್ನು ತಾವೇ ಭರಿಸಿ ಕಾರ್ಡ್ ಮಾಡಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 1100ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಕಾರ್ಡ್ ಮಾಡಿಸಿ, ತಾವೇ ಖುದ್ದಾಗಿ ಮನೆ ಮನೆಗೆ ತೆರಳಿ ಹಂಚಿಕೆ ಮಾಡಿದ್ದಾರೆ. ಯುವಕರು ಮಾಡುತ್ತಿರುವ ಈ ಕಾರ್ಯದಿಂದ ಬಹಳಷ್ಟು ಜನರಿಗೆ ತುಂಬಾ ಅನುಕೂಲವಾಗಿದೆ. ಕಂಪ್ಯೂಟರ್ ಸೆಂಟರ್ ಇರುವ ಕಡೆ ಒಬ್ಬೊಬ್ಬರೇ ತೆರಳಿ ಕಾರ್ಡ್ ಮಾಡಿಸುವುದಕ್ಕೆ ಸಮಯ ಮತ್ತು ಹೆಚ್ಚಿನ ಹಣ ಖರ್ಚಾಗುತ್ತದೆ. ಯುವಕರು ಕೇವಲ 15 ರೂ. ಮಾತ್ರ ಪಡೆದು ಉಳಿದ ಹಣವನ್ನು ತಾವೇ ಭರಿಸಿಕೊಂಡು ಜನರಿಗೆ ಆರೋಗ್ಯ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ.

ABOUT THE AUTHOR

...view details