ಕುಷ್ಟಗಿ (ಕೊಪ್ಪಳ) : ಪಿಯುಸಿ ಪೂರಕ ಪರೀಕ್ಷೆಗಳು ಆರಂಭವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿನ ಪರೀಕ್ಷಾ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪರೀಕ್ಷಾ ಕೆಂದ್ರದ ಮುಖ್ಯಸ್ಥ ಡಾ.ಹೆಚ್.ಜಿ. ನೀರಗೇರಿ ತಿಳಿಸಿದರು.
ಪಿಯುಸಿ ಪೂರಕ ಪರೀಕ್ಷೆ ಹಿನ್ನೆಲೆ ಸ್ಯಾನಿಟೈಸರ್ ಸಿಂಪಡಣೆ - supplementation exams
ಪಿಯುಸಿ ಪೂರಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕುಷ್ಟಗಿಯ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಸೋಂಕು ಮುಕ್ತಗೊಳಿಸಲಾಯಿತು.

ಪಿಯುಸಿ ಪೂರಕ ಪರೀಕ್ಷೆ ಹಿನ್ನೆಲೆ ಸ್ಯಾನಿಟೈಸರ್ ಸಿಂಪಡಣೆ
ಪಿಯುಸಿ ಪೂರಕ ಪರೀಕ್ಷೆ ಹಿನ್ನೆಲೆ ಸ್ಯಾನಿಟೈಸರ್ ಸಿಂಪಡಣೆ
ಗುರುವಾರ ಇಂಗ್ಲೀಷ್ ಪರೀಕ್ಷೆ ಇದೆ. ಈ ಹಿನ್ನೆಲೆ ಕುಷ್ಟಗಿ, ಯಲಬುರ್ಗಾ ಸೇರಿದಂತೆ 16 ಕಾಲೇಜುಗಳ 842 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಾಗಾಗಿ ಕುಷ್ಟಗಿಯ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಸೋಂಕು ಮುಕ್ತಗೊಳಿಸಲಾಗಿದೆ. ಇನ್ನು ಕಂಟೈನ್ಮೆಂಟ್ ಪ್ರದೇಶದ ಐವರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿದೆ ಎಂದು ನೀರಗೇರಿ ತಿಳಿಸಿದರು.