ಕೊಪ್ಪಳ:ನಮಗೆ (ಬಿಜೆಪಿ) ಕಣ್ಣು, ಕಿವಿ, ಮೂಗು ಎಲ್ಲವೂ ಇದೆ. ಆದರೆ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಇವೆಯೋ ಇಲ್ಲವೋ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಟಾಂಗ್ ನೀಡಿದ್ದಾರೆ.
ಸಂಸದ ಸಂಗಣ್ಣ ಕರಡಿ ಕೊಪ್ಪಳದಲ್ಲಿ ಮಾತನಾಡಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂಬ ಹೆಸರನ್ನು ವಿವೇಚನೆ ಇಲ್ಲದೆ ಸರ್ಕಾರ ಬದಲಾಯಿಸಿದೆ ಎಂಬ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಸಂಸದ ಸಂಗಣ್ಣ ಕರಡಿ ಟಾಂಗ್ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಸರ್ಕಾರ ಯಾವುದೇ ಒಂದು ಆದೇಶ ಹೊರಡಿಸುವಾಗ ಕಾನೂನು ಬದ್ಧವಾಗಿಯೇ ಇರುತ್ತದೆ ಎಂದರು.
ಇನ್ನು ಯಲ್ಲಾಲಿಂಗನ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಯಲ್ಲಾಲಿಂಗನ ತಾಯಿ ಹೇಳಿರೋದು ನನಗೆ ಮಾಹಿತಿ ಇಲ್ಲ. ಆದರೆ ಅವರು ಹೋರಾಟ ಮಾಡುತ್ತಿದ್ದಾರೆ. ಅಂದು ನಾವೂ ಸಹ ಹೋರಾಟ ಮಾಡಿದ್ದೆವು. ಈಗ ಯಲ್ಲಾಲಿಂಗನ ತಾಯಿ ಸಿಬಿಐ ತನಿಖೆಗೆ ಆಗ್ರಹಿಸಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.