ಕೊಪ್ಪಳ:ಇತ್ತೀಚೆಗೆ ಹಾಸ್ಟೆಲ್ನಲ್ಲಿ ಧ್ವಜ ಕಂಬ ತೆರವುಗೊಳಿಸಲು ತೆರಳಿ ವಿದ್ಯುತ್ ಶಾಕ್ನಿಂದ ಐವರು ವಿದ್ಯಾರ್ಥಿಗಳ ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜಿಲ್ಲೆಯಲ್ಲಿ ಸಂಭವಿಸಿದೆ. ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸಾವು... ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ದುರಂತ - ಕೊಪ್ಪಳ
ಆಟವಾಡುತ್ತಿರುವಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು, ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ.

ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸಾವು
ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸಾವು
ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹಳ್ಳದಲ್ಲಿ ಈ ದುರ್ಘಟನೆ ನಡೆದಿದ್ದು, ಪುಣೆ ಮೂಲದ ಸೋನು (7), ಸವಿತ (4), ಕವಿತ (2) ಎಂಬ ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತ ಮಕ್ಕಳ ಪಾಲಕರು ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಮಕ್ಕಳು ಆಟವಾಡಲು ತೆರಳಿದ್ದಾಗ ಮರಳಿನ ಪಡಿ ಬಿದ್ದು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.