ಕೊಪ್ಪಳ: ಜಿಲ್ಲೆಯಿಂದ ಈವರೆಗೆ ಕೊರೊನಾ ಟೆಸ್ಟ್ಗಾಗಿ ಲ್ಯಾಬ್ಗೆ ಕಳಿಸಲಾಗಿದ್ದ ಎಲ್ಲಾ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಈವರೆಗಿನ ಎಲ್ಲಾ ಸ್ಯಾಂಪಲ್ಸ್ ರಿಪೋರ್ಟ್ ನೆಗೆಟಿವ್: ಜಿಲ್ಲಾಧಿಕಾರಿ - Samples report negative
ಕೊಪ್ಪಳ ಜಿಲ್ಲೆಯಿಂದ ಕೊರೊನಾ ಟೆಸ್ಟ್ಗಾಗಿ ಲ್ಯಾಬ್ಗೆ ಕಳಿಸಲಾಗಿದ್ದ ಎಲ್ಲಾ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 1,136 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ ಎಲ್ಲಾ 1136 ಜನರ ಲ್ಯಾಬ್ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ. ಢಾಣಕ ಶಿರೂರು ಗ್ರಾಮದ ಪ್ರಾಥಮಿಕ ಸಂಪರ್ಕ ಹೊಂದಿದ್ದ 18 ಜನರ ವರದಿಯೂ ನೆಗೆಟಿವ್ ಬಂದಿದೆ.
ಈ 18 ಜನರ ಗಂಟಲು ದ್ರವ, ರಕ್ತದ ಮಾದರಿಯನ್ನು ಮೇ 13 ರಂದು ಮತ್ತೊಮ್ಮೆ ಪರೀಕ್ಷೆಗೆ ಕಳಿಸಲಾಗುತ್ತದೆ. ಇನ್ನು ಢಾಣಕ ಶಿರೂರು ಗ್ರಾಮದ ಗರ್ಭಿಣಿಯ ತಾಯಿ ಯಲಬುರ್ಗಾ ತಾಲೂಕಿಗೆ ಬಂದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಂಟೈನ್ ಮಾಡಲಾಗಿದ್ದ ಎಲ್ಲಾ 25 ಜನರ ವರದಿಯೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.