ಕರ್ನಾಟಕ

karnataka

ETV Bharat / state

ದೇವರ ನಿರ್ದೇಶನವಿಲ್ಲದೆ ಯಾವ ನಾಟಕವೂ ನಡೆಯುವುದಿಲ್ಲ: ಗವಿಸಿದ್ಧೇಶ್ವರ ಸ್ವಾಮೀಜಿ

ಇತ್ತೀಚಿನ ದಿನಗಳಲ್ಲಿ ಮನುಷ್ಯ ಆದಾಯ ಗಳಿಸುವ ಭರದಲ್ಲಿ ಆರೋಗ್ಯ, ಸಂತೋಷವನ್ನು ಕಳೆದುಕೊಂಡಿದ್ದಾನೆ. ಇವೆರಡು ಇಲ್ಲದ ಜೀವನ‌ ನಶ್ವರ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Gavisiddeswara Swamiji
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

By ETV Bharat Karnataka Team

Published : Nov 17, 2023, 2:11 PM IST

ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಂಪತ್ತಿಗೆ ಸವಾಲ್ ನಾಟಕ

ಕೊಪ್ಪಳ : ಈ ಜಗತ್ತು ಒಂದು ನಾಟಕ ಮಂದಿರ. ಸಕಲ ಜೀವಿಗಳು ಒಂದೊಂದು ಪಾತ್ರಧಾರಿಗಳು. ದೇವರೇ ನಿರ್ದೇಶಕ, ಆ ದೇವರ ನಿರ್ದೇಶನವಿಲ್ಲದೆ ಒಂದು ಹುಲ್ಲುಕಡ್ಡಿ ಸಹ ಅಲುಗಾಡದು, ಯಾವ ನಾಟಕವು ನಡೆಯದು ಎಂದು ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಕೊಪ್ಪಳದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ 'ಸಂಪತ್ತಿಗೆ ಸವಾಲ್' ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಇವರೆಲ್ಲ ಪ್ರತಿನಿತ್ಯ ಕೈಯಲ್ಲಿ ಲೋಗೋ, ಪೆನ್ನು ಹಿಡಿದು ಸುದ್ದಿಯ ಒತ್ತಡದಲ್ಲಿ ಇರುತ್ತಾರೆ. ಆದರೆ ಇಂದು ಅವರೆಲ್ಲ ಬಣ್ಣ ಹಚ್ಚಿ ಕಲಾವಿದರಾಗಿದ್ದರೆ. ಪ್ರತಿ ದಿನ ಬೇರೆಯವರ ನಾಟಕ ನೋಡಿ ಸುದ್ದಿ ಬರೆಯುವವರು ಇಂದು ಅವರೇ ನಾಟಕಕ್ಕೆ ಬಣ್ಣ ಹೆಚ್ಚಿದ್ದು ವಿಶೇಷ ಎಂದರು.

ಈ ಭೂಮಿ ಮೇಲೆ ಎಲ್ಲರದ್ದೂ ಪಾತ್ರಗಳಿವೆ. ಆದರೆ, ಅವರವರ ಪಾತ್ರ ಯಶಸ್ವಿಯಾಗಿ ಅಭಿನಯಿಸಿದರೆ ಮಾತ್ರ ಜೀವನ ಅರ್ಥಪೂರ್ಣ. ಇತ್ತೀಚಿನ ದಿನದಲ್ಲಿ ಮನುಷ್ಯ ಆದಾಯ ಗಳಿಸುವ ಭರದಲ್ಲಿ ಆರೋಗ್ಯ, ಸಂತೋಷ ಕಳೆದುಕೊಂಡಿದ್ದಾನೆ. ಇವೆರಡೂ ಇಲ್ಲದ ಜೀವನ‌ ನಶ್ವರ ಎಂದರು.

ಇದನ್ನೂ ಓದಿ:'ಗಣೇಶ ದೇವರಲ್ಲ' ಎಂದಿದ್ದ ಸಾಣೇಹಳ್ಳಿ ಶ್ರೀಗಳ ವಿರುದ್ಧ ದೂರು ದಾಖಲಿಸಿದ ಪ್ರಶಾಂತ್ ಸಂಬರಗಿ

ಪಿ.ಬಿ.ಧುತ್ತರಗಿ ಅವರ ಸಂಪತ್ತಿಗೆ ಸವಾಲ್ ನಾಟಕವು ಸಿನಿಮಾವಾಗಿದ್ದು, ಡಾ.ರಾಜ್‌ಕುಮಾರ್ ಅಭಿನಯಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹದೊಡ್ಡ ದಾಖಲೆ ನಿರ್ಮಿಸಿದೆ. ಇಂತಹ ದಾಖಲೆಯ ಸಂಪತ್ತಿಗೆ ಸವಾಲ್ ನಾಟಕವನ್ನು ಮೀಡಿಯಾ ಕ್ಲಬ್ ಸದಸ್ಯರು ತಮ್ಮ ಸುದ್ದಿಯ ಒತ್ತಡದ ಮಧ್ಯೆ ಮನೋಜ್ಞವಾಗಿ ಅಭಿನಯಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.‌ ಪತ್ರಕರ್ತರ ನಾಟಕವನ್ನು ತಡರಾತ್ರಿವರೆಗೂ ಪ್ರೇಕ್ಷಕರು ಕುಳಿತು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಿದರು ಎಂದರು.

ಮೀಡಿಯಾ ಕ್ಲಬ್ ಸದಸ್ಯರು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸಾಮಾಜಿಕ ಸಂದೇಶ ಸಾರುವ ನಾಟಕಗಳನ್ನು ಅಭಿನಯಿಸುತ್ತಾರೆ.‌ ಅದೇ ರೀತಿ ಈ ವರ್ಷ ಸಂಪತ್ತಿಗೆ ಸವಾಲ್ ನಾಟಕ ಅಭಿನಯಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಸಚಿವ ಸತೀಶ್​ ಜಾರಕಿಹೊಳಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ: ಪ್ರಸನ್ನಾನಂದ ಸ್ವಾಮೀಜಿ

ABOUT THE AUTHOR

...view details