ಕರ್ನಾಟಕ

karnataka

ETV Bharat / state

ಸಾಲುಮರದ ವೀರಾಚಾರಿಯವರಿಗೆ ಗಂಗಾವತಿಯಲ್ಲಿ ಸನ್ಮಾನ.. - ಗಂಗಾವತಿಗೆ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ

ಗಂಗಾವತಿಗೆ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿಯವರಿಗೆ ಸನ್ಮಾನವನ್ನು ಮಾಡಲಾಯಿತು. ದಂತ ವೈದ್ಯ ಶಿವಕುಮಾರ ಸ್ಥಳಕ್ಕೆ ತೆರಳಿ ವೀರಾಚಾರಿ ಅವರನ್ನು ಮನೆಗೆ ಕರೆತಂದು ಸ್ನೇಹಿತರೊಂದಿಗೆ ಸೇರಿ ಆತ್ಮೀಯವಾಗಿ ಸನ್ಮಾನಿಸಿದರು.

ಸಾಲುಮರದ ವೀರಾಚಾರಿಯವರಿಗೆ ಗಂಗಾವತಿಯಲ್ಲಿ ಸನ್ಮಾನ

By

Published : Nov 19, 2019, 3:49 PM IST

ಕೊಪ್ಪಳ: ಗಂಗಾವತಿಗೆ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿಯವರಿಗೆ ಸನ್ಮಾನವನ್ನು ಮಾಡಲಾಯಿತು. ಕೃಷಿ ಉಪಕರಣಗಳ ಮಾರಾಟ ಮಾಡಲು ದಾವಣಗೆರೆಯವರಾದ ವೀರಾಚಾರಿಯವರು ಸಿಂಧನೂರಿಗೆ ತೆರಳಿದ್ದರು. ಆದರೆ, ಅವರ ಕೃಷಿ ಪರಿಕರಗಳಿದ್ದ ವಾಹನದಲ್ಲಿ ತಾಂತ್ರಿಕ ಸಮಸ್ಯೆಯಿಂದ ಅವರು ಗಂಗಾವತಿಯಲ್ಲಿಯೇ ಉಳಿದುಕೊಳ್ಳ ಬೇಕಾಯಿತು.

ಸಾಲುಮರದ ವೀರಾಚಾರಿಯವರಿಗೆ ಗಂಗಾವತಿಯಲ್ಲಿ ಸನ್ಮಾನ..

ಈ ವೇಳೆ ದಂತ ವೈದ್ಯ ಶಿವಕುಮಾರ ಸ್ಥಳಕ್ಕೆ ತೆರಳಿ ವೀರಾಚಾರಿ ಅವರನ್ನು ಮನೆಗೆ ಕರೆತಂದು ಸ್ನೇಹಿತರೊಂದಿಗೆ ಸೇರಿ ಆತ್ಮೀಯವಾಗಿ ಸನ್ಮಾನಿಸಿದರು. ಜತೆಗೆ ರಾತ್ರಿ ತಮ್ಮ ಮನೆಯಲ್ಲಿ ತಂಗಲು ಅವಕಾಶ ನೀಡಿ ಅವರೊಂದಿಗಿನ ಅನುಭವಗಳನ್ನು ಸ್ನೇಹಿತರು ಹಂಚಿಕೊಂಡರು.

For All Latest Updates

ABOUT THE AUTHOR

...view details