ಕೊಪ್ಪಳ:ಜಿಲ್ಲೆಯ ಗಂಗಾವತಿ ನಗರದಲ್ಲಿ ರಾಷ್ಟಧ್ವಜಕ್ಕಿಂತ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಾಡುವಂತಹ ದೃಶ್ಯ ಕಂಡು ಬಂದಿದೆ.
ಗಂಗಾವತಿಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರುತ್ತಿದೆ ಭಾಗವಧ್ವಜ: ಸಾರ್ವಜನಿಕರ ಆಕ್ರೋಶ - ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ
ಗಂಗಾವತಿ ನಗರದ ಸಿಂಧನೂರು ರಸ್ತೆಯಲ್ಲಿರುವ ಶ್ರೀ ಮಹಾರಾಣಾ ಪ್ರಾತಾಪಸಿಂಹ ವೃತ್ತದಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಾಡುತ್ತಿರುವ ದೃಶ್ಯ ಕಂಡು ಬಂದಿದೆ.
ರಾಷ್ಟ್ರಧ್ವಜಕ್ಕಿಂತ ಮೇಲ್ಭಾಗದಲ್ಲಿ ಹಾರಾಡುತ್ತಿರುವ ಕೇಸರಿ ಧ್ವಜ
ಗಂಗಾವತಿ ನಗರದ ಸಿಂಧನೂರು ರಸ್ತೆಯಲ್ಲಿರುವ ಶ್ರೀ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಾಡುತ್ತಿದೆ. ಆಗಸ್ಟ್ 15 ರಂದು ಮಹಾರಾಣ ಪ್ರತಾಪಸಿಂಹ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಬಳಿಕ ರಾಷ್ಟ್ರಧ್ವಜ ಅವರೋಹಣ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ.
ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಯಾವ ಧ್ವಜವೂ ಹಾರಾಡ ಬಾರದು ಎನ್ನುವ ನಿಯಮವಿದೆ. ಆದರೆ ಈ ನಿಯಮ ಗಾಳಿಗೆ ತೂರಿ ಕೇಸರಿ ಧ್ವಜವನ್ನು ಮೇಲ್ಭಾಗದಲ್ಲಿ ಹಾರಾಡುವಂತೆ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.