ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಸಾವಜಿ ಹೋಟೆಲ್​ಗಳನ್ನೇ ಹುಡುಕಿ ಹೋಗ್ತಾರೆ ನಾನ್​ ವೆಜ್​ ಪ್ರಿಯರು... ಕಾರಣ ಗೊತ್ತೇ? - undefined

ಕೊಪ್ಪಳದಲ್ಲಿ ನಾನ್ ವೆಜ್ ಹೋಟೆಲ್​ಗಳು ಸಾಕಷ್ಟಿದ್ದರೂ ಜನರು ಮಾತ್ರ ಸಾವಜಿ ಹೋಟೆಲ್​ಗಳನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿ ಸಿಗುವ ಟೇಸ್ಟ್ ಬೇರೆ ಕಡೆ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಮಾತಾಗಿದೆ.

ಕೊಪ್ಪಳದ ಸಾವಜಿ ಹೋಟೆಲ್​ಗಳು

By

Published : May 29, 2019, 10:49 AM IST

ಕೊಪ್ಪಳ:ಕೊಪ್ಪಳ ಅಂದ್ರೆ ಅಲ್ಲೇನಿದೆ, ಬರಿ ಉರಿಬಿಸಿಲು ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲಿನ ಸಾವಜಿ ಹೋಟೆಲ್​ಗಳಲ್ಲಿ ಸಿಗುವ ಮಾಂಸಹಾರಿ ಊಟ ಸಖತ್​ ಫೇಮಸ್​ ಆಗಿದೆ.

ಹೌದು‌.., ಒಂದೊಂದು ತಿಂಡಿ ತಿನಿಸುಗಳಿಂದ ಒಂದೊಂದು ಊರುಗಳು ಪ್ರಸಿದ್ಧಿಯನ್ನು ಪಡೆದಿರುವಂತೆ ಜಿಲ್ಲೆಯಲ್ಲಿರುವ ಸಾವಜಿ ಹೋಟೆಲ್​ಗಳ ಕೈರುಚಿಯು ನಾನ್ ವೆಜ್ ಪ್ರಿಯರ ನಾಲಿಗೆ ಮೇಲೆ ನೀರೂರುವಂತೆ ಮಾಡುತ್ತದೆ.

ಕೊಪ್ಪಳದ ಸಾವಜಿ ಹೋಟೆಲ್​ಗಳು

ಕೊಪ್ಪಳ, ಭಾಗ್ಯನಗರ, ಹನುಮಸಾಗರ, ಕುಕನೂರು, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಸಾವಜಿ ಹೋಟೆಲ್​ಗಳು ಜಾಸ್ತಿ. ಈ ಹೋಟೆಲ್​ಗಳು ಯಾವಾಗ ನೋಡಿದ್ರು ಗ್ರಾಹಕರಿಂದ ಫುಲ್ ಆಗಿರುತ್ತವೆ. ಅಂದಹಾಗೆ ಸಾವಜಿಗಳು ಅಂದರೆ ಸೋಮವಂಶ ಕ್ಷತ್ರಿಯ ಸಮುದಾಯದ ಜನರು. ಇವರನ್ನು ರೂಢಿ ಭಾಷೆಯಲ್ಲಿ ಇಲ್ಲಿ ಸಾವಜಿಗಳು ಎಂದು ಕರೆಯುತ್ತಾರೆ. ಸಾವಜಿಗಳ ಅಡುಗೆಯ ರುಚಿಯನ್ನು ಒಂದೇ ಒಂದು ಬಾರಿ ನೋಡಿದರೂ ಪದೇಪದೇ ಇವರ ಹೋಟೆಲ್​ಗಳನ್ನು ಜನರು ಹುಡುಕಿಕೊಂಡು ಹೋಗುತ್ತಾರೆ. ಇಲ್ಲಿ ಚಿಕನ್, ಮಟನ್, ಫಿಶ್, ಎಗ್​ನಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಸಾವಜಿಗಳ ಮಾಂಸಹಾರಿ ಅಡುಗೆಯ ರುಚಿ ಜಿಲ್ಲೆಯ ಬೇರೆ ಹೋಟೆಲ್​ಳಲ್ಲಿ, ಡಾಬಾಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇದಕ್ಕೆ ಮುಖ್ಯ ಕಾರಣ ನಾನ್ ವೆಜ್ ಅಡುಗೆಗೆ ಬೇಕಾದ ಎಲ್ಲ ಮಸಾಲೆ ಪದಾರ್ಥಗಳನ್ನು ಅವರೇ ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳುತ್ತಾರೆ. ಅವರ ಅಡಿಗೆಯಲ್ಲಿ ಒಂದು ರುಚಿ ಕಟ್ಟಿನ ಹಿಡಿತವಿದ್ದು, ಇದು ಬೇರೆ ಹೋಟೆಲ್​ಗಳಲ್ಲಿ ಸಿಗುವುದಿಲ್ಲ ಅನ್ನೋದು ಪಕ್ಕಾ.

ನಾನ್ ವೆಜ್ ಊಟ ಸಿಗುವ ಬೇರೆ ಬೇರೆ ಹೋಟೆಲ್​ಗಳು ಕೊಪ್ಪಳದಲ್ಲಿ ಸಾಕಷ್ಟಿದ್ದರೂ ಜನರು ಮಾತ್ರ ಸಾವಜಿ ಹೋಟೆಲ್​ಗಳನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿ ಸಿಗುವ ಟೇಸ್ಟ್ ಬೇರೆ ಕಡೆ ಸಿಗುವುದಿಲ್ಲ, ಮನೆಯ ಊಟದಂತೆ ಇರುತ್ತದೆ. ದರವೂ ಅಂತಹ ದುಬಾರಿ ಇರೋದಿಲ್ಲ ಎನ್ನುತ್ತಾರೆ ಗ್ರಾಹಕ ಯಲ್ಲಪ್ಪ.

For All Latest Updates

TAGGED:

ABOUT THE AUTHOR

...view details