ಗಂಗಾವತಿ: ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಎಲ್ಲ ಕೋಮುಪ್ರೇರಿತ ಗಲಭೆ, ಗಲಾಟೆಗಳಿಗೆ ಆರ್‌ಎಸ್‌ಎಸ್ ಮೂಲ ಕಾರಣ ಎಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು. ತಾಲೂಕಿನ ಆನೆಗೊಂದಿ ಸಮೀಪದ ಪಂಪಾ ಸರೋವರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಜಾಬ್, ಮಸೀದಿಗಳಲ್ಲಿ ಮೈಕ್ ಬಳಕೆಯ ವಿವಾದಗಳು ಮುನ್ನೆಲೆಗೆ ಬರುತ್ತಿವೆ. ಮೈಕ್ ಸಮಸ್ಯೆ ಸಮಸ್ಯೆಯೇ ಅಲ್ಲ. ಎಲ್ಲ ದೇವಸ್ಥಾನಗಳಲ್ಲಿಯೂ ವಿಶೇಷ ಸಂದರ್ಭದಲ್ಲಿ ಮೈಕ್, ಡಿಜೆ ಹಾಕುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಕೋಮುಪ್ರೇರಿತ ದ್ವೇಷಕ್ಕೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಮೋದಿ ಆ್ಯಂಡ್ ಟೀಂ ಸೋಲಿಸುವ ಮೂಲಕ ಜನ ಬಿಜೆಪಿಯನ್ನು ಮೂಲೆಗುಂಪು ಮಾಡಲಿದ್ದಾರೆ ಎಂದರು.