ಗಂಗಾವತಿ: ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮಚರಣ್ ನಾಯಕರಾಗಿ ಮಿಂಚಿರುವ 'ಆರ್ಆರ್ಆರ್' ಸಿನಿಮಾ ನಗರದ ಎರಡು ಚಿತ್ರಮಂದಿರದಲ್ಲಿ ತೆರೆ ಕಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆದ್ರೆ, ಒಂದು ಟಿಕೆಟ್ಗೆ ಐದು ನೂರು ರೂಪಾಯಿ ನಿಗದಿಪಡಿಸಿದ್ದು, ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯಿತು.
ಗಂಗಾವತಿಯಲ್ಲಿ 'ಆರ್ಆರ್ಆರ್' ಭರ್ಜರಿ ಪ್ರದರ್ಶನ : ಒಂದು ಟಿಕೆಟ್ ದರ 500 ರೂ. - 'ಆರ್ಆರ್ಆರ್' ಟಿಕೆಟ್ ದರ 500 ರೂ.
ದೇಶದಾದ್ಯಂತ ಇಂದು RRR ಸಿನಿಮಾ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಮುಂಜಾನೆ 3 ಗಂಟೆಯಿಂದಲೇ ಗಂಗಾವತಿಯ ಕನಕದುರ್ಗಾ ಮತ್ತು ಚಂದ್ರಹಾಸ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಂಡಿತು. ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳು ಗಂಟೆಗಟ್ಟಗಲೇ ಟಿಕೆಟ್ಗಾಗಿ ಕಾದ ದೃಶ್ಯ ಕಂಡುಬಂದಿತು..
ಆರ್ಆರ್ಆರ್
ಕನಕದುರ್ಗಾ ಮತ್ತು ಚಂದ್ರಹಾಸ ಚಿತ್ರಮಂದಿರದಲ್ಲಿ ಬೆಳಗ್ಗೆ ಮೂರು ಗಂಟೆಯಿಂದಲೇ ಶೋ ಆರಂಭಿಸಲಾಗಿತ್ತು. ತಮ್ಮ ನೆಚ್ಚಿನ ನಟರನ್ನು ತೆರೆ ಮೇಲೆ ಕಾಣಲು ಅಭಿಮಾನಿಗಳು ಬೆಳಗ್ಗೆ ಐದು ಗಂಟೆಯಿಂದಲೇ ಟಿಕೆಟ್ಗೆ ಗಂಟೆಗಟ್ಟಲೇ ಕಾಯ್ದು ನಿಂತಿರುವ ದೃಶ್ಯ ಕಂಡು ಬಂದಿತು.
ಇದನ್ನೂ ಓದಿ:ದೊಡ್ಡಬಳ್ಳಾಪುರದಲ್ಲಿ ಮುಂಜಾನೆ 3 ಗಂಟೆಗೆ ಪ್ರದರ್ಶನಗೊಂಡ RRR, ಕುಣಿದು ಕುಪ್ಪಳಿಸಿದ ಫ್ಯಾನ್ಸ್