ಗಂಗಾವತಿ: ತಾಲೂಕಿನ ಆನೆಗೊಂದಿಯಲ್ಲಿ ಜನವರಿ 9 ಹಾಗೂ 10ರಂದು ನಡೆಯಲಿರುವ ಉತ್ಸವ-2020 ಈಗಾಗಲೇ ವಿಭಿನ್ನವಾದ ಸ್ಪರ್ಧೆ, ಕ್ರೀಡಾಕೂಟಗಳ ಆಯೋಜನೆಯಿಂದ ಗಮನ ಸೆಳೆಯುತ್ತಿದ್ದು, ಅದಕ್ಕೆ ಮತ್ತಷ್ಟು ಮೆರುಗು ತರಲು ನಟ ರಾಕಿಂಗ್ ಸ್ಟಾರ್ ಯಶ್ ಆಗಮಿಸುತ್ತಿದ್ದಾರೆ.
ಆನೆಗೊಂದಿ ಉತ್ಸವಕ್ಕೆ ರಾಕಿಂಗ್ ಸ್ಟಾರ್ ಯಶ್ ಆಗಮನ ಬಹುತೇಕ ಖಚಿತ
ಆನೆಗೊಂದಿಯಲ್ಲಿ ಜನವರಿ 9, 10ರಂದು ನಡೆಯಲಿರುವ ಉತ್ಸವ-2020 ಈಗಾಗಲೇ ವಿಭಿನ್ನವಾದ ಸ್ಪರ್ಧೆ, ಕ್ರೀಡಾಕೂಟಗಳ ಆಯೋಜನೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಉತ್ಸವಕ್ಕೆ ಮೆರುಗು ತರುವ ನಿಟ್ಟಿನಲ್ಲಿ ನಟ ರಾಕಿಂಗ್ ಸ್ಟಾರ್ ನಟ ಯಶ್ ಅವರಿಗೆ ಆಹ್ವಾನ ನೀಡಲಾಗಿದೆ. ಅಷ್ಟೇ ಅಲ್ಲದೆ, ಅವರು ಬರುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ಹೊರಡಿಸಿದೆ. ಉತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಅಚ್ಚುಕಟ್ಟು ವ್ಯವಸ್ಥೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಜನವರಿ 10ರಂದು ಮುಖ್ಯವೇದಿಕೆಯಲ್ಲಿ ಗಾಯಕ ವಿಜಯ್ಪ್ರಕಾಶ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಹಾಗೂ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ್ ಸೇರಿದಂತೆ ಹಲವರು ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇದೀಗ ಈ ಸಾಲಿಗೆ ನಟ ಯಶ್ ಸೇರಿಕೊಂಡಿದ್ದಾರೆ.