ಕರ್ನಾಟಕ

karnataka

ETV Bharat / state

ರಾಜ್ಯ ಹೆದ್ದಾರಿಯನ್ನೇ ನುಂಗಿದ ಗುಂಡಿ: ವಾಹನ ಸವಾರರ ಪರದಾಟ - ರಾಜ್ಯ ಹೆದ್ದಾರಿ

ಪಟ್ಟಣದಿಂದ ಗಜೇಂದ್ರಗಡ ಮಾರ್ಗದಲ್ಲಿ ನಿಡಶೇಷಿ ಕೆರೆ ಪಕ್ಕದ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಹೇಳಿದರೂ, ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

road
road

By

Published : Aug 4, 2020, 8:16 AM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದಿಂದ ಗಜೇಂದ್ರಗಡ ಮಾರ್ಗದಲ್ಲಿ ನಿಡಶೇಷಿ ಕೆರೆ ಪಕ್ಕದ ರಾಜ್ಯ ಹೆದ್ದಾರಿಯಲ್ಲಿ ತೆರೆದ ಗುಂಡಿ ಸೃಷ್ಟಿಯಾಗಿದೆ. ಆದಾಗ್ಯೂ ಲೋಕೋಪಯೋಗಿ ಇಲಾಖೆ ಕಣ್ತೆರೆಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನ ಸವಾರರ ಪರದಾಟ

ಈ ರಾಜ್ಯ ಹೆದ್ದಾರಿಯಲ್ಲಿ ಆಗಿರುವ ಅವಾಂತರಕ್ಕೆ ಏನೂ ತಿಳಿಯದ ವಾಹನ ಚಾಲಕರು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಮಳೆ ನೀರು ನಿಲ್ಲುತ್ತಿರುವ ಹಿನ್ನೆಯಲ್ಲಿ ರಸ್ತೆಯ ಇಂಚು ಬಿಡದೇ ನೀರು ಆಕ್ರಮಿಸಿದೆ.

ರಾಜ್ಯ ಹೆದ್ದಾರಿಯನ್ನೇ ನುಂಗಿದ ಗುಂಡಿ

ಮಳೆಯಿಂದ ನೀರು ನಿಲ್ಲುತ್ತಿರುವ ಬಗ್ಗೆ ನಿತ್ಯ ಸಂಚರಿಸುವರಿಗೆ ತಿಳಿದಿದ್ದು, ಈ ಗುಂಡಿ ಭೀತಿಯಿಂದ ಸೈಡ್​ಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಅಷ್ಟಾಗಿ ತೊಂದರೆ ಕಂಡು ಬಂದಿಲ್ಲ. ಆದರೆ ಅನ್ಯ ಜಿಲ್ಲೆ, ಇತರ ರಾಜ್ಯಗಳ ವಾಹನ ಸವಾರರಿಗೆ ಇಲ್ಲಿ ಗುಂಡಿ ಇರುವುದು ಗೊತ್ತಾಗದೇ ಗುಂಡಿಗೆ ಕುಸಿಯುತ್ತಿದ್ದು, ಇದರಿಂದ ವಾಹನದ ಎಕ್ಸೆಲ್ ಪಟ್ಟಿ ಕಟ್ ಆಗುತ್ತಿದೆ.

ದಿನವೂ ಒಂದೆರೆಡು ವಾಹನಗಳು ಈ ತೊಂದರೆ ಅನುಭವಿಸೋದು ಸಾಮಾನ್ಯವಾಗಿದೆ. ಆದರೆ, ಲೋಕೋಪಯೋಗಿ ಇಲಾಖೆ ಈ ಹೆದ್ದಾರಿ ದುರಸ್ತಿ ಮಾಡಿಸದೇ ನಿರ್ಲಕ್ಷವಹಿಸಿದೆ ಎಂದು ಕುಷ್ಟಗಿಯ ಸಣ್ಣ ದುರಗಪ್ಪ ವಡಿಗೇರಿ ಆಕ್ಷೇಪಿಸಿದ್ದಾರೆ. ಈ ರಾಜ್ಯ ಹೆದ್ದಾರಿ ಅವಸ್ಥೆ ಬಗ್ಗೆ ಇಲಾಖೆಯ ಎಇಇ ಎಚ್. ಬಿ. ಕಂಠಿ ಅವರ ಗಮನಕ್ಕೆ ತಂದರೂ ಜಲ್ಲಿ ಕಲ್ಲು ಹಾಕಿ ಭರ್ತಿ ಮಾಡುವಷ್ಟು ಪುರಸೊತ್ತಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details