ಕರ್ನಾಟಕ

karnataka

ETV Bharat / state

ನೆರೆಬೆಂಚಿ ಗ್ರಾಮದಲ್ಲಿರೋದು ರಸ್ತೆನಾ ಇಲ್ಲ ಕೆಸರುಗದ್ದೆನಾ.. - Kushtagi koppala latest news

ಮೊದಲೇ ಹದಗೆಟ್ಟಿದ್ದ ಈ ರಸ್ತೆ ಕೆಲ ದಿನಗಳಿಂದ ತುಂತುರು ಮಳೆಯಿಂದಾಗಿ ಅಕ್ಷರಶಃ ಕೆಸರು ಗದ್ದೆಯಾಗಿದೆ...

Road problem
Road problem

By

Published : Jul 18, 2020, 9:46 PM IST

ಕುಷ್ಟಗಿ(ಕೊಪ್ಪಳ):ತಾಲೂಕಿನ ನೆರೆಬೆಂಚಿ ಗ್ರಾಮದ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ. ರಸ್ತೆಯ ಅವ್ಯವಸ್ಥೆಗೆ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ತಾಲೂಕಿನ ಕಂದಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆಬೆಂಚಿ ಗ್ರಾಮದ ಈ ಮುಖ್ಯ ರಸ್ತೆಯನ್ನು ನಾಲ್ಕೈದು ವರ್ಷಗಳ ಹಿಂದೆ ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿತ್ತು. ಸದ್ಯ ರಸ್ತೆ ಹದಗೆಟ್ಟಿದೆ. ಮೊದಲೇ ಹದಗೆಟ್ಟಿದ್ದ ಈ ರಸ್ತೆ ಕೆಲ ದಿನಗಳಿಂದ ತುಂತುರು ಮಳೆಯಿಂದಾಗಿ ಅಕ್ಷರಶಃ ಕೆಸರು ಗದ್ದೆಯಾಗಿದೆ.

ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಸಿಸಿ ರಸ್ತೆ ಬೇಡಿಕೆಯಿದೆ. ಹಾಗಾಗಿ ಪಿಡಿಒ ಅವರಿಗೆ ಸ್ಥಳ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಭರಮಣ್ಣ ಕಲ್ಲಗುಡಿ ಒತ್ತಾಯಿಸಿದ್ದಾರೆ.

ABOUT THE AUTHOR

...view details