ಕೊಪ್ಪಳ:ಕಲ್ಮಲ ಶಿಗ್ಗಾಂವ್ ರಾಜ್ಯ ಹೆದ್ದಾರಿ ಸರಿ ಪಡಿಸುವಂತೆ ಆಗ್ರಹಿಸಿ ಅಳವಂಡಿ ಭಾಗದ ರೈತರಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಯಿತು.
ಕಲ್ಮಲ ಶಿಗ್ಗಾಂವ್ ರಾಜ್ಯ ಹೆದ್ದಾರಿ 23 ರಲ್ಲಿ ಗುಂಡಿ ಬಿದ್ದಿದ್ದು, ಜನ ಸಂಚಾರ ಕಷ್ಟಕರವಾಗಿದೆ. ಕಳೆದ ನಾಲ್ಕು ವರ್ಷದಿಂದ ರಸ್ತೆ ಅಭಿವೃದ್ಧಿ ಪಡಿಸಲು ಆಗ್ರಹಿಸುತ್ತಿದ್ದರೂ ಸಹ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತ ಜನರು ನಿನ್ನೆ ಅಳವಂಡಿಯಿಂದ ಆರಂಭವಾದ ಪಾದಯಾತ್ರೆ ಇಂದು ಗವಿಮಠದಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.