ಕುಷ್ಟಗಿ (ಕೊಪ್ಪಳ): ಚಂದ್ರಮೌಳೇಶ್ವರ ಟ್ರೇಡರ್ಸ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 18 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದ ತಂಡ ದಾಳಿ ನಡೆಸಿ, ಅಕ್ಕಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹ.... ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದಲ್ಲಿ ದಿಢೀರ್ ದಾಳಿ - ಕುಷ್ಟಗಿ ಕೊಪ್ಪಳ ಲೆಟೆಸ್ಟ್ ನ್ಯೂಸ್
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 18 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮಾಲೀಕ ಕಳಕಪ್ಪ ಸೂಡಿ ವಿರುದ್ದ ಪ್ರಕರಣ ದಾಖಲಾಗಿದೆ.
![ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹ.... ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದಲ್ಲಿ ದಿಢೀರ್ ದಾಳಿ Rice storage illegally in kushtagi](https://etvbharatimages.akamaized.net/etvbharat/prod-images/768-512-08:16:39:1597761999-kn-kst-07-18-anna-bhagya-akki-vashakke-kac10028-18082020195752-1808f-1597760872-420.jpg)
Rice storage illegally in kushtagi
ಈ ಕುರಿತು ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಎಂ. ಸಿದ್ದೇಶ, ಅಹಾರ ಇಲಾಖೆ ಶಿರೆಸ್ತೇದಾರ ರಜನೀಕಾಂತ ಕೆಂಗಾರಿ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ನೇತೃತ್ವದ ತಂಡದಿಂದ ದಿಢೀರ್ ದಾಳಿ ನಡೆದಿದೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 18 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮಾಲೀಕ ಕಳಕಪ್ಪ ಸೂಡಿ ವಿರುದ್ಧ ಪ್ರಕರಣ ದಾಖಲಾಗಿದೆ.