ಗಂಗಾವತಿ: ತುಂಗಭದ್ರಾ ನದಿ ದಂಡೆಯಿಂದ ಮರಳು ಸಂಗ್ರಹಿಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸ್ಥಳದ ಮೇಲೆ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, 5 ಟಿಪ್ಪರ್ ಲಾರಿ, ಮರಳು ಮತ್ತು ನಾಡದೋಣಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರಳು ಸಂಗ್ರಹದ ಮೇಲೆ ಅಧಿಕಾರಿಗಳ ದಾಳಿ: ಮರಳು, ಟಿಪ್ಪರ್ ವಶ - ಗಂಗಾವತಿ ಕೊಪ್ಪಳ ಲೆಟೆಸ್ಟ್ ನ್ಯೂಸ್
ತುಂಗಭದ್ರಾ ನದಿ ಪಾತ್ರದಿಂದ ಮರಳು ಸಂಗ್ರಹಿಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸ್ಥಳದ ಮೇಲೆ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Illegal sand business
ಚಿಕ್ಕಜಂತಕಲ್ ಬಳಿ ನದಿಯಲ್ಲಿ ತೆಪ್ಪ ಹಾಕಿ ಮರಳು ಸಂಗ್ರಹಿಸುತ್ತಿದ್ದ ನಾಲ್ಕು ನಾಡ ದೋಣಿಗಳನ್ನು ಸೀಜ್ ಮಾಡಲಾಗಿದೆ. ಮಲ್ಲಾಪುರ ಗ್ರಾಮದ ಕ್ವಾರಿ ಮೇಲೆ ದಾಳಿ ಮಾಡಿ ದ್ರಾಕ್ಷಿ ತೋಟಕ್ಕೆ ಬಳಸುತ್ತಿದ್ದ ಕಲ್ಲುಗಳನ್ನು ನಾಶಪಡಿಸಲಾಗಿದೆ.
ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸೈಯದ್ ಫಜೀಲ್, ತಹಶೀಲ್ದಾರ್ ಕವಿತಾ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರೆ ಅಧಿಕಾರಿಗಳ ತಂಡ, ಬಸವನದುರ್ಗ, ನಾಗರಹಳ್ಳಿಯಲ್ಲಿ ದಾಳಿ ಮಾಡಿ ಮರಳು ಜಪ್ತಿ ಮಾಡಿದೆ.