ಕರ್ನಾಟಕ

karnataka

ETV Bharat / state

ಚಿರತೆ ಹಾವಳಿ: ಅಂಜನಾದ್ರಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ - ಈಟಿವಿ ಭಾರತ್​ ಕನ್ನಡ

ಅಂಜನಾದ್ರಿ ಬೆಟ್ಟದ ಸಮೀಪ ಇತ್ತೀಚೆಗೆ ಚಿರತೆಗಳು ಕಂಡು ಬಂದಿರುವ ಹಿನ್ನೆಲೆ ಬೆಟ್ಟಕ್ಕೆ ಬರುವ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕೆಲ ಷರತ್ತುಗಳನ್ನು ಹಾಕಿ ನಿರ್ಬಂಧ ವಿಧಿಸಲಾಗಿದೆ.

restrictions-for-devotees
ಚಿರತೆ ಹಾವಳಿ: ಅಂಜನಾದ್ರಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ

By

Published : Aug 30, 2022, 12:03 PM IST

ಗಂಗಾವತಿ(ಕೊಪ್ಪಳ) :ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಧಾರ್ಮಿಕ ಸ್ಥಳ ಅಂಜನಾದ್ರಿ ಬೆಟ್ಟದ ಸಮೀಪ ಇತ್ತೀಚೆಗೆ ಚಿರತೆಗಳು ಕಂಡು ಬಂದಿರುವ ಹಿನ್ನೆಲೆ ಬೆಟ್ಟಕ್ಕೆ ಬರುವ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕೆಲ ಷರತ್ತುಗಳನ್ನು ಹಾಕಿ ನಿರ್ಬಂಧ ವಿಧಿಸಲಾಗಿದೆ.

480ಕ್ಕೂ ಹೆಚ್ಚು ಅಡಿಗಳ ಎತ್ತರದ ಬೆಟ್ಟದ ಮೇಲಿರುವ ಆಂಜನೇಯನ ದರ್ಶನ ಪಡೆಯಲು ಭಕ್ತರಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಬೆಟ್ಟದ ಮೇಲೆ ಮತ್ತು ಅಲ್ಲಲ್ಲಿ ಫೊಟೋ ಕ್ಲಿಕ್ಕಿಸಿಕೊಳ್ಳುವುದನ್ನು ನಿರ್ಬಂಧಿಸಿ ದೇಗುಲದ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿರತೆಗಳ ಚಲನವಲನ ದೇಗುಲದ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆ ಹಾಗೂ ದೇಗುಲದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ವನ್ಯ ಪ್ರಾಣಿಗಳ ಆವಾಸ ಸ್ಥಾನವಾದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ದೇಗುಲದ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ :ಬೋನಿಗೆ ಬಿದ್ದ ಚಿರತೆ: ಜೋಡಿ ಚಿರತೆ ಪೈಕಿ ಗಂಡು ಚಿರತೆ ಸೆರೆ

ABOUT THE AUTHOR

...view details