ಗಂಗಾವತಿ: ನಮ್ಮ ಸಮಾಜದವರಿಗೆ ಮಂತ್ರಿಗಿರಿ, ಉಪ ಮುಖ್ಯಮಂತ್ರಿ ಅಥವಾ ಸಿಎಂ ಮಾಡಿ ಎಂದು ನಾವು ಕೇಳುವುದಿಲ್ಲ. ನಮ್ಮ ಬೇಡಿಕೆ ಏನಿದ್ದರೂ ಸಮಾಜವನ್ನು 2ಎಗೆ ಸೇರಿಸಿ, ಹಿಂದುಳಿದ ವರ್ಗದಲ್ಲಿ ಬರುವ ಮೀಸಲಾತಿಗಳನ್ನು ನೀಡಬೇಕು ಎಂಬುದಷ್ಟೇ ಆಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡರು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕು ಘಟಕದ ನೇತೃತ್ವದಲ್ಲಿ ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಮುಖಂಡ ಸುರೇಶ ಗೌರಪ್ಪ, ನಮ್ಮ ಸಮಾಜದ ಜಯಮೃತ್ಯುಂಜಯ ಸ್ವಾಮೀಜಿ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ನಮ್ಮ ಸಹಮತವೂ ಇಲ್ಲ, ವಿರೋಧವೂ ಇಲ್ಲ. ಆದರೆ, ನಮ್ಮನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂಬ ಉದ್ದೇಶ ಇರಿಸಿಕೊಂಡು ಅ.28ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.