ಕೊಪ್ಪಳ:ನಿಜಾಮುದ್ದೀನ್‌ಗೆ ತೆರಳಿತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದ 13 ಜನರ ಲ್ಯಾಬ್ ರಿಪೋರ್ಟ್ ಇವತ್ತು ನೆಗಟಿವ್ ಎಂದು ಬಂದಿದೆ.
ದೆಹಲಿಗೆ ತೆರಳಿದ್ದ ಎಲ್ಲಾ 33 ಮಂದಿಯ ವರದಿ ನೆಗೆಟಿವ್.. ನಿಟ್ಟುಸಿರುಬಿಟ್ಟಿತು ಕೊಪ್ಪಳ.. - Koppal News
ಏಪ್ರಿಲ್ 4 ರಂದು 13 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅವರ ಲ್ಯಾಬ್ ರಿಪೋರ್ಟ್ ಸಹ ನೆಗಟಿವ್ ಎಂದು ಬಂದಿದೆ.

ಕೊಪ್ಪಳದಿಂದ ದೆಹಲಿಗೆ ತೆರಳಿದ್ದ 13 ಜನರ ವರದಿ ನೆಗೆಟಿವ್
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಜಿಲ್ಲೆಯಿಂದ ಒಟ್ಟು 33 ಜನ ದೆಹಲಿಗೆ ಹೋಗಿ ಬಂದವರಿದ್ದರು. ಈ ಪೈಕಿ 23 ಜನ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದರು. ಈ 33 ಜನರಲ್ಲಿ ಮೊದಲಿಗೆ 20 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಆ 20 ಜನರ ಲ್ಯಾಬ್ ರಿಪೋರ್ಟ್ ನೆಗಟಿವ್ ಬಂದಿತ್ತು.
ಮತ್ತೆ ಏಪ್ರಿಲ್ 4 ರಂದು 13 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅವರ ಲ್ಯಾಬ್ ರಿಪೋರ್ಟ್ ಸಹ ನೆಗಟಿವ್ ಎಂದು ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.