ಕರ್ನಾಟಕ

karnataka

ETV Bharat / state

ಭಾಗ್ಯನಗರ ಪಟ್ಟಣದಲ್ಲಿ ಪುನರಾರಂಭವಾದ ಸಂತೆ: ಮಾಸ್ಕ್ ಮರೆತ ಜನ - Koppal vegetable market open news

ಕೊಪ್ಪಳದ ಭಾಗ್ಯನಗರ ಪಟ್ಟಣದ ತರಕಾರಿ ಸಂತೆ ಇಂದು ಮತ್ತೆ ಪ್ರಾರಂಭಗೊಂಡಿದ್ದು, ಜನರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಸಂತೆಗೆ ಬಂದ ದೃಶ್ಯ ಕಂಡುಬಂತು.

Koppal market
Koppal market

By

Published : Jun 8, 2020, 1:45 PM IST

ಕೊಪ್ಪಳ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೊಪ್ಪಳದ ಭಾಗ್ಯನಗರ ಪಟ್ಟಣದ ತರಕಾರಿ ಸಂತೆ ಇಂದು ಮತ್ತೆ ಆರಂಭವಾಗಿದೆ‌.

ಭಾಗ್ಯನಗರ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ಹಿಂದೆ‌ ಇರುವ ಬಯಲು ಪ್ರದೇಶದಲ್ಲಿ ಸೋಮವಾರ ಸೇರಿದಂತೆ ವಾರದ ಮೂರು ದಿನ ಸಂತೆ ನಡೆಯುತ್ತದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಂತೆಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಈಗ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಇಂದು ಮೊದಲ ಬಾರಿಗೆ ಭಾಗ್ಯನಗರದಲ್ಲಿ ಸಂತೆ ನಡೆಯಿತು.

ಬೆಳಗ್ಗೆಯಿಂದಲೇ ಆರಂಭಗೊಂಡ ಸಂತೆಗೆ ಕೆಲವರು ಮಾಸ್ಕ್ ಹಾಕಿಕೊಂಡು ಬಂದು ತರಕಾರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದರೆ, ಮತ್ತೆ ಕೆಲವರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಸಂತೆಗೆ ಬಂದಿದ್ದರು.

ABOUT THE AUTHOR

...view details