ಕರ್ನಾಟಕ

karnataka

ETV Bharat / state

ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್

ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿಮಠ ಮತ್ತು ರಾಯರಮಠದ ಭಕ್ತರು ಜು. 14ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ವಿಧಿಸಿ ತಹಶೀಲ್ದಾರ್​ ಯು. ನಾಗರಾಜ್ ಆದೇಶಿಸಿದ್ದಾರೆ.

ನವವೃಂದಾವನ ಗಡ್ಡೆ
ನವವೃಂದಾವನ ಗಡ್ಡೆ

By

Published : Jul 13, 2022, 4:20 PM IST

ಗಂಗಾವತಿ:ಮಧ್ವಮತದ ಅನುಯಾಯಿಗಳ ಪವಿತ್ರ ಸ್ಥಳವಾಗಿರುವ ಹಾಗೂ ಒಂಬತ್ತು ಯತಿಗಳ ವೃಂದಾವನಸ್ಥರಾಗಿರುವ ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿಮಠ ಮತ್ತು ರಾಯರಮಠದ ಭಕ್ತರು ಜು. 14 ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ.

ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್

ಜು.14 ರಿಂದ ಉಬಯ ಮಠಗಳ ನೇತೃತ್ವದಲ್ಲಿ ಪ್ರತ್ಯೇಕವಾಗಿ ರಘುವರ್ಯ ತೀರ್ಥರ ಮಹಿಮೋತ್ಸವ ಮತ್ತು ಜಯತೀರ್ಥರ ಆರಾಧನೆ ಹಮ್ಮಿಕೊಳ್ಳಲು ಯೋಜಿಸಲಾಗಿತ್ತು. ಜು. 14ರಿಂದ 20ರವರೆಗೆ ಧಾರ್ಮಿಕ ಕಾರ್ಯಕ್ಕೆ ಅವಕಾಶ ನೀಡುವಂತೆ ಉತ್ತರಾದಿ ಮಠ ಜಿಲ್ಲಾಡಳಿತವನ್ನು ಕೋರಿತ್ತು.

ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್

ಇದೇ ಸಂದರ್ಭದಲ್ಲಿ ಜು. 17 ರಿಂದ 20ರವರೆಗೆ ಜಯತೀರ್ಥರ ಆರಾಧನೆಗೆ ಅವಕಾಶ ನೀಡುವಂತೆ ರಾಯರಮಠ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಧಾರ್ಮಿಕ ವಿಧಿ-ವಿಧಾನಗಳ ಆಚರಣೆಗಳಲ್ಲಿ ಉಭಯ ಮಠಗಳಿಗೆ ಸಹಮತವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

ಹೀಗಾಗಿ ಜು. 14ರಿಂದ ಆರಂಭವಾಗಲಿರುವ ಎಲ್ಲ ಮಾದರಿಯ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ತಹಶೀಲ್ದಾರ್​ ಯು. ನಾಗರಾಜ್ ಆದೇಶಿಸಿದ್ದಾರೆ. ಅಲ್ಲದೇ ಉದ್ದೇಶಿತ ಸ್ಥಳದಲ್ಲಿ ಕಲಂ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಓದಿ:ಲಾಂಛನ ವ್ಯಾಗ್ರವಾಗಿದೆ, ಉಗ್ರವಾಗಿದೆ ಎಂಬುದು ನಮ್ಮ ದೃಷ್ಟಿಕೋನವನ್ನು ಸೂಚಿಸುತ್ತದೆ: ಸಿಎಂ ಬೊಮ್ಮಾಯಿ

For All Latest Updates

TAGGED:

ABOUT THE AUTHOR

...view details