ಗಂಗಾವತಿ : ಶಿವಮೊಗ್ಗ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ಗಂಗಾವತಿಯ ವ್ಯಾಪಾರಿಯನ್ನು ಶಿವಮೊಗ್ಗ ಪೊಲೀಸರು ವಿಚಾರಣೆ ನಡೆಸಿದರು. ಕೆಲ ಮಾಹಿತಿ ಪಡೆದು ಬಳಿಕ ಇಂದು ಸಂಜೆ ಗಂಗಾವತಿ ವ್ಯಾಪಾರಿಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.
ಶಿವಮೊಗ್ಗ ಶಂಕಿತ ಉಗ್ರನ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ಶಂಕೆ ಮೇರೆಗೆ ಶಿವಮೊಗ್ಗದ ಪೊಲೀಸರು ಗಂಗಾವತಿಯ ವ್ಯಾಪಾರಿ ಶಬ್ಬೀರ್ ಮಂಡಲಗಿರಿ ಎಂಬುರನ್ನು ಭಾನುವಾರ ಸಂಜೆ ವಿಚಾರಣೆಗೆ ಕರೆದಿದ್ದರು. ಇಂದು ವಿಚಾರಣೆ ನಡೆಸಿ, ಬಳಿಕ ವಾಪಸ್ ಮನೆಗೆ ಕಳುಹಿಸಿದ್ದಾರೆ.