ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭೆಗೆ ಎಂಟ್ರಿ ಕೊಟ್ಟ ಕೆಆರ್​​​ಪಿಪಿ: ರೆಡ್ಡಿ ಬೆಂಬಲಿಸಿದ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ

ಗಂಗಾವತಿ ನಗರಸಭೆ ಆಡಳಿತದಲ್ಲಿ ರೆಡ್ಡಿ ಬೆಂಬಲಿಗರೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಜಿ ಜನಾರ್ದನರೆಡ್ಡಿ ಅವರು ಬೆಂಬಲಿತ ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರು ಬುಧವಾರ ನಗರಸಭೆ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ.

Sudha Somnath Gangavathy Municipal Council Vice President
ರೆಡ್ಡಿ ಬೆಂಬಲಿತ ಸದಸ್ಯೆ ಸುಧಾ ಸೋಮನಾಥ ಗಂಗಾವತಿ ನಗರಸಭೆ ಉಪಾಧ್ಯಕ್ಷೆ

By

Published : Mar 29, 2023, 3:56 PM IST

ಗಂಗಾವತಿ(ಕೊಪ್ಪಳ):ಕಳೆದ ಎರಡು ದಶಕದಿಂದ ಕಾಂಗ್ರೆಸ್ ವಶದಲ್ಲಿರುವ ಗಂಗಾವತಿ ನಗರಸಭೆ ಆಡಳಿತಕ್ಕೆ ಇದೇ ಮೊದಲ ಬಾರಿಗೆ ಮಾಜಿ ಸಚಿವ ಜಿ ಜನಾರ್ದನರೆಡ್ಡಿ ಅವರ ಬೆಂಬಲಿಗರೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಮಾಜಿ ಸಚಿವ ಜಿ ಜನಾರ್ದನರೆಡ್ಡಿ ಅವರ ಪಕ್ಷದ ಬೆಂಬಲಿಗರಾಗಿರುವ ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರು ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬುಧವಾರ ಗಂಗಾವತಿ ನಗರಸಭೆಗೆ ಮೊದಲ ಬಾರಿಗೆ ಕೆಆರ್​ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಉಪಾಧ್ಯಕ್ಷರ ಕೊಠಡಿಗೆ ತೆರಳಿ, ಉಪಾಧ್ಯಕ್ಷ ಸ್ಥಾನ ಸ್ವೀಕರಿಸಿದ ಸುಧಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ನಗರದ ಅಭಿವೃದ್ಧಿಗೆ ಶ್ರಮಿಸುವಂತೆ, ಇದಕ್ಕೆ ತಮ್ಮ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪಕ್ಷದ ವಿಪ್ ಉಲ್ಲಂಘನೆ: ಈ ಹಿಂದೆ ನಗರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನದಲ್ಲಿದ್ದ ಸುಧಾ ಸೋಮನಾಥ ಅವರ ಸದಸ್ಯತ್ವ ರದ್ದು ಮಾಡುವ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗಳು, ಕರ್ನಾಟಕ ಸರ್ಕಾರದ 1964ರ ಪುರಸಭೆ ಕಾಯ್ದೆ ಉಲ್ಲಂಘಿಸಿರುವ ಬಗ್ಗೆ ಉಲ್ಲೇಖಿಸಿದ್ದರು. ನಿಯಮ ಬಾಹಿರವಾಗಿ ನನ್ನ ಸದಸ್ಯತ್ವ ರದ್ದು ಮಾಡಿದ್ದಾರೆ ಎಂದು ಆಕ್ಷೇಪಿಸಿ ಸುಧಾ ಅವರು ಧಾರವಾಡದ ಹೈಕೋರ್ಟ್​ ಮೆಟ್ಟಿಲೇರಿದ್ದರು. ಬಿಜೆಪಿ ಪಕ್ಷದ ನಗರ ಘಟಕದ ಅಧ್ಯಕ್ಷ ಸಲ್ಲಿಸಿದ್ದ ವಿಪ್ ಉಲ್ಲಂಘನೆ ದೂರನ್ನು ಆಧರಿಸಿ ಸುಧಾ ಸೋಮನಾಥ ಅವರ ಸದಸ್ಯತ್ವ ರದ್ದು ಮಾಡಿ ಜಿಲ್ಲಾಧಿಕಾರಿಗಳು ಅಂದು ಆದೇಶ ಮಾಡಿದ್ದರು. ಹೀಗಾಗಿ ಆರು ತಿಂಗಳಿಂದ ಸುಧಾ ಸದಸ್ಯತ್ವದಿಂದ ವಂಚಿತರಾಗಿದ್ದರು.

ನಗರಸಭೆಗೆ ನಡೆದ ಚುನಾವಣೆಯಲ್ಲಿ ವಾರ್ಡ್​ ನಂಬರ್ 26ರಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಸುಧಾ ಸೋಮನಾಥ ಅವರು, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಪಕ್ಷd ವಿಪ್ ಉಲ್ಲಂಘಿಸಿದ್ದರು. ಈ ಹಿನ್ನೆಲೆ ಪಕ್ಷದ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಸಲ್ಲಿಸಿದ ದೂರು ಆಲಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿ ಅವರು, ಸುಧಾ ಸೋಮನಾಥ ಪಕ್ಷದ ನಿಯಮ ಉಲ್ಲಂಘಿಸಿದ್ದ ಆರೋಪದ ಹಿನ್ನೆಲೆ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದ್ದರು.

ಉಪಾಧ್ಯಕ್ಷೆ ಸ್ಥಾನ ಯಥಾಸ್ಥಿತಿ:ಆದರೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಸುಧಾ ಅವರಿಗೆ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಬೆಂಬಲ ಸೂಚಿಸಿದ್ದರು. ನ್ಯಾಯಾಲಯವು ಮುಂದಿನ ಆದೇಶ ಜಾರಿಯಾಗುವವರೆಗೂ ಯಥಾ ಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ. ಸುಧಾ ಅವರಿಗೆ ನಗರಸಭೆಯ ಉಪಾಧ್ಯಕ್ಷ ಸ್ಥಾನ ಅಬಾಧಿತವಾಗಿದ್ದು, ಬುಧವಾರ ತಮ್ಮನ್ನು ಬೆಂಬಲಿಸಿದ ಕೆಆರ್​ಪಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಸಮ್ಮುಖದಲ್ಲಿ ಮತ್ತೊಮ್ಮೆ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.

ಕಳೆದ ಒಂದೂವರೆ ದಶಕದಿಂದಲೂ ಗಂಗಾವತಿ ನಗರಸಭೆ ಆಡಳಿತ ವಶಕ್ಕೆ ಪಡೆಯಬೇಕು ಎಂಬ ಬಿಜೆಪಿಯ ಕನಸು ಕನಸಾಗದ ಸಂದರ್ಭದಲ್ಲಿ ಇನ್ನೂ ಕ್ಷೇತ್ರದಲ್ಲಿ ಖಾತೆ ತೆರೆಯದ ಕೆಆರ್​ಪಿಪಿ ಬೆಂಬಲಿತರೊಬ್ಬರು ನಗರಸಭೆಯ ಉಪಾಧ್ಯಕ್ಷ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂಓದಿ:ಬಳ್ಳಾರಿ ಮಹಾನಗರ ಪಾಲಿಕೆಕೆಗೆ ನೂತನ ಸಾರಥಿ.. 23ನೇ ವಯಸ್ಸಿಗೇ ಮೇಯರ್ ಪಟ್ಟ ಅಲಂಕರಿಸಿದ ತ್ರಿವೇಣಿ

ABOUT THE AUTHOR

...view details