ಗಂಗಾವತಿ: ಆನೆಗೊಂದಿಯ ನವವೃಂದಾವನದಲ್ಲಿ ನಡೆಯುವ ಪದ್ಮನಾಭ ತೀರ್ಥರ ಮಧ್ಯಾರಾಧನೆ ಮತ್ತು ಉತ್ತರ ಆರಾಧನೆಗೆ ಸೂಕ್ತ ಭದ್ರತೆ ನೀಡುವಂತೆ ಕೋರಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಪೊಲೀಸರ ಮೊರೆ ಹೋಗಿದ್ದಾರೆ.
ಆರಾಧನೆಗೆ ರಕ್ಷಣೆ ಕೊಡಿ: ಪೊಲೀಸರ ಮೊರೆ ಹೋದ ರಾಯರ ಮಠದ ವ್ಯವಸ್ಥಾಪಕ - ಆನೆಗೊಂದಿ ನವವೃಂದಾವನ ಆರಾಧನೆ ರಕ್ಷಣೆಗೆ ಮನವಿ ಸುದ್ದಿ
ನವವೃಂದಾವನದಲ್ಲಿ ನಡೆಯಲಿರುವ ಪದ್ಮನಾಭ ತೀರ್ಥರ ಮಧ್ಯಾರಾಧನೆ ಮತ್ತು ಉತ್ತರ ಆರಾಧನೆಗೆ ಸೂಕ್ತ ಭದ್ರತೆ ನೀಡುವಂತೆ ಕೋರಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಆನೊಗೊಂದಿ ಗ್ರಾಮೀಣ ಪೊಲೀಸರ ಮೊರೆ ಹೋಗಿದ್ದಾರೆ.

ಆನೆಗೊಂದಿ ನವವೃಂದಾವನ
ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ನಡುವೆ ಸೋಮವಾರ ಮಧ್ಯಾಹ್ನ 3.01 ನಡೆಯಲಿರುವ ಪದ್ಮನಾಭ ತೀರ್ಥರ ಆರಾಧನೆಗೆ ಸೂಕ್ತ ರಕ್ಷಣೆ ನೀಡುವಂತೆ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಗ್ರಾಮೀಣ ಪೊಲೀಸ್ ಠಾಣೆಗೆ ಭಾನುವಾರ ರಾತ್ರಿ ಮನವಿ ಸಲ್ಲಿಸಿದ್ದಾರೆ.