ಗಂಗಾವತಿ (ಕೊಪ್ಪಳ):ಪಡಿತರ ವ್ಯವಸ್ಥೆಯಡಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳುವ ಉದ್ದೇಶಕ್ಕೆ ನ್ಯಾಯಬೆಲೆ ಅಂಗಡಿ ಮಾಲಿಕರು ಸಭೆ ಸೇರಿ ಸಂಘ ಅಸ್ತಿತ್ವಕ್ಕೆ ತಂದುಕೊಂಡಿದ್ದಾರೆ.
ನ್ಯಾಯಾಬೆಲೆ ಅಂಗಡಿಗಳ ನಿರ್ವಾಹಕರು ಮತ್ತು ಮಾಲಿಕರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಮತ್ತು ಪಡಿಸತ ವ್ಯವಸ್ಥೆಯನ್ನು ಸುಮವಾಗಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷೆ ಪುಟ್ಟಮ್ಮ ಹನುಮಂತಪ್ಪ ಗಿಡ್ಡಿ ಹೇಳಿದರು.