ಕೊಪ್ಪಳ : ಕೊರೊನಾ ಭೀತಿಯ ಕಾರಣ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಅಕ್ಕಿ, ಬೇಳೆಕಾಳು ನೀಡಲಾಗುತ್ತಿದೆ.
ಬಿಸಿಯೂಟ ಬದಲು ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ವಿತರಣೆ - Ration Distribution to School Children
ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಶಾಲೆಗಳು ಮುಚ್ಚಿರುವುದರಿಂದ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಅಕ್ಕಿ, ಬೇಳೆ ವಿತರಿಸಲಾಗುತ್ತಿದೆ.

ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ವಿತರಣೆ
ನಗರದ ಸಿಪಿಎಸ್ ಶಾಲೆಯಲ್ಲಿ ಮಾರ್ಚ್ 21 ಏಪ್ರಿಲ್ 14 ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ, 1 ರಿಂದ 5 ನೇ ತರಗತಿಯವರೆಗೆ ದಿನಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ ಮತ್ತು 6 ರಿಂದ 8 ನೇ ತರಗತಿಯವರಿಗೆ ದಿನಕ್ಕೆ 150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆ ವಿತರಿಸಲಾಗುತ್ತಿದೆ.
ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ವಿತರಣೆ
ಸಿಪಿಎಸ್ ಶಾಲೆಯಲ್ಲಿ 381 ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ ವಿತರಿಸಲಾಗುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಕ್ಕಿ, ಬೇಳೆ ಪಡೆಯಲು ಬಂದ ಪಾಲಕರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.