ಕರ್ನಾಟಕ

karnataka

ETV Bharat / state

ಮಾನವನ ಇತಿಹಾಸ ತೆರೆದಿಟ್ಟ ಅಪರೂಪದ ವಸ್ತುಪ್ರದರ್ಶನ: ಮಕ್ಕಳಿಂದ ಚರಿತ್ರೆ ಹೇಳುವ ಸಾಹಸ - Rare Exhibition For Students

ಗಂಗಾವತಿಯಲ್ಲಿ ಶಾಲಾ ಮಕ್ಕಳಿಂದ ಅಪರೂಪದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಮಾನವನ ಉದಯ ಮತ್ತು ಬಳಿಕದ ಇತಿಹಾಸವನ್ನು ಬಿಂಬಿಸುವ ಪ್ರದರ್ಶನ ಇದಾಗಿತ್ತು. ಮಕ್ಕಳು ಇತಿಹಾಸ ಆಳಿತ ರಾಜರ ಕಥೆ ಹೇಳಿದ್ದಾರೆ.

Rare Exhibition In Gangavathi
ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ

By

Published : Jan 18, 2023, 7:26 PM IST

Updated : Jan 19, 2023, 12:45 PM IST

ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ

ಗಂಗಾವತಿ: ಮಾನವನ ವಿಕಾಸನ, ಗುಹಾಂತರ ವಾಸ, ಸಂಘ ಜೀವಿಯಾಗಿ ಬದಲಾಗಿ ಇಂದು ಅಧುನಿಕ ನಾಗರಿಕತೆ ಸೇರಿದಂತೆ ಮಾನವ ಲಕ್ಷಾಂತರ ವರ್ಷಗಳ ಇತಿಹಾಸವನ್ನು ಬಿಂಬಿಸುವ ವಸ್ತುಪ್ರದರ್ಶನ ನಗರದ ಗುಡ್ ಶಪರ್ಡ್​ ಶಿಕ್ಷಣ ಸಂಸ್ಥೆಯ ಬೇತೆಲ್ ಮಹಾವಿದ್ಯಾಲಯದಲ್ಲಿ ಇಂದು ಆಯೋಜನೆ ಮಾಡಲಾಗಿತ್ತು.

ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ

ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ಕಲಾ ವಿಭಾಗದಿಂದ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಮನುಷ್ಯ ಭೂಮಿಯಲ್ಲಿ ಹೇಗೆ ಅವತರಿಸಿದ ಎಂಬ ಡಾರ್ವಿನ್​ನ ಮಂಗನಿಂದ ಮಾನವ ಸಿದ್ಧಾಂತವನ್ನು ಮಕ್ಕಳು ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದರು. ಮಂಗನಿಂದ ಮಾನವನಾದ ಬಳಿಕ ಮನುಷ್ಯನಲ್ಲಿ ಉಂಟಾದ ಜೈವಿಕ ಬದಲಾವಣೆ, ಶಿಲಾಯುಗದಲ್ಲಿ ಬಳಕೆ ಮಾಡಿದ ಕಲ್ಲಿನ ಲೋಹ, ಅವರ ಯುಗ, ಅಧುನಿಕ ಕಾಲಘಟ್ಟದಲ್ಲಿ ಮನುಷ್ಯನ ರೂಪಾಂತರ ಹೇಗೆಲ್ಲಾ ಆಯ್ತು ಎಂಬುವುದರ ಬಗ್ಗೆ ಮಕ್ಕಳು ರೂಪಕ ಸಮೇತ ವಸ್ತು ಪ್ರದರ್ಶನ ಏರ್ಪಡಿಸಿದ್ದರು. ಲಕ್ಷಾಂತರ ವರ್ಷಗಳಿಂದ ಮಾನವನ ಇತಿಹಾಸದಲ್ಲಿ ಆದ ಬದಲಾವಣೆ, ಅವನು ಬಳಕೆ ಮಾಡುತ್ತಿದ್ದ ವಸ್ತುಗಳು, ಸಾಮಾಜಿಕ ಜೀವನ ಪದ್ಧತಿ, ಆಹಾರದ ಶೈಲಿ, ಬಟ್ಟೆ ಬಳಸುವ ವಿಧಾನ ಸೇರಿದಂತೆ ಮಾನವನ ಸಂಪೂರ್ಣ ಕಥಾನಕದ ಮೇಲೆ ವಸ್ತು ಪ್ರದರ್ಶನದಲ್ಲಿ ಇತಿಹಾಸದ ಮೇಲೆ ಬೆಳಕು ಹರಿಸಲಾಯಿತು.

ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ

ಭಾರತದಲ್ಲಿ ಉದಯಿಸಿದ ನಾಗರಿಕತೆ, ಇಜಿಪ್ತಿನ ನಾಗರಿಕತೆ, ಮಮ್ಮಿಗಳ ಶವ ಸಂಸ್ಕಾರ, ಪ್ರಾಚೀನ ನಾಗರಿಕತೆಗಳ ಉಗಮ, ಮನುಷ್ಯನ ಜೀವನದಲ್ಲಿ ನದಿ-ಸರೋವರಗಳ ಪಾತ್ರ ಇತ್ಯಾದಿಗಳ ಬಗ್ಗೆ ಮಕ್ಕಳು ಸಂಶೋಧಿತ ವಸ್ತುಗಳನ್ನು ಪ್ರದರ್ಶನದಲ್ಲಿ ಇರಿಸಿದ್ದರು. ಕೇವಲ ನಾಗರಿಕತೆ ಮಾತ್ರವಲ್ಲ, ಭಾರತಲ್ಲಿ ಆಳ್ವಿಕೆ ನಡೆಸಿದ ಮೋಘಲ್ ಸಾಮ್ರಾಟರು, ಭಾರತ ದೇಶದಲ್ಲಿನ ರಾಜ್ಯಗಳು ಯಾವ ಕಾಲಘಟ್ಟದಲ್ಲಿ ಉದಯಿಸಿದವು, ಯಾವ ರಾಜ್ಯದಲ್ಲಿ ಏನೆಲ್ಲಾ ಬೆಳೆಗಳನ್ನು ಅತ್ಯಧಿಕವಾಗಿ ಬೆಳೆಯುತ್ತಾರೆ ಎಂಬ ಮಾಹಿತಿ ವಸ್ತು ಪ್ರದರ್ಶನದಲ್ಲಿ ಇತ್ತು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕೇರಳ, ಕರ್ನಾಟಕ, ಗೋವಾ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್​​ಗಢ , ಜಮ್ಮು-ಕಾಶ್ಮೀರ, ಹಿಮಾಚಲ, ಜಾರ್ಖಂಡ್, ಬಿಹಾರ, ಸಿಕ್ಕಿಂ, ಓಡಿಶಾ, ಮಣಿಪುರ, ನಾಗಾಲ್ಯಾಂಡ್ ಮೊದಲಾದ ರಾಜ್ಯಗಳ ಬೆಳೆ, ವಿಶೇಷತೆಗಳ ಮೇಲೆ ಬೆಳಕು ಚಲ್ಲಲಾಗಿತ್ತು.

ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ

ಕರ್ನಾಟಕದಲ್ಲಿ ಸಿಕ್ಕಿರುವ ಅಶೋಕ ಶಿಲಾಶಾಸನಗಳು, ಭಾರತದಲ್ಲಿರುವ ಗೋಲ್ಡನ್ ಟೆಂಟಪ್, ಸಾಂಚಿಯಲ್ಲಿರುವ ಅಶೋಕನ ಸ್ತೂಪ, ಭಾರತದ ರಾಜ್ಯಗಳ ಉದಯದ ಹಿನ್ನೆಲೆ, ಅವುಗಳ ಇತಿಹಾಸ, ಭಾರತದಲ್ಲಿನ ನಾಟ್ಯಗಳ ಪ್ರಕಾರಗಳು, ಆಹಾರಧಾನ್ಯಗಳು ಇತ್ಯಾದಿಗಳ ಮಾಹಿತಿ ನೀಡಲಾಗಿತ್ತು.

ಮಕ್ಕಳಲ್ಲಿ ಭೌದ್ಧಿಕ ವಿಕಸನ:ವಸ್ತು ಪ್ರದರ್ಶನದ ಬಗ್ಗೆ ಮತನಾಡಿದ ಕಾಲೇಜಿನ ಆಡಳಿತಾಧಿಕಾರಿ ನಿವೃತ್ತ ಅರ್ಥಶಾಸ್ತ್ರದ ಪ್ರಾಧ್ಯಾಪಕ ಬಿ.ಸಿ. ಐಗೋಳ, ಮಕ್ಕಳಲ್ಲಿ ಕೇವಲ ಪಠ್ಯ ಮತ್ತು ಪ್ರವಚನಕ್ಕಿಂತ ಅವರ ಮನೋವಿಕಾಸನಕ್ಕೆ ಭೌದ್ಧಿಕ ಚಟುವಟಿಕೆ ಅತ್ಯಗತ್ಯ. ಹೀಗಾಗಿ ವಸ್ತು ಪ್ರದರ್ಶನದ ಮೂಲಕ ಅವರಲ್ಲಿನ ಕೌಶಲ್ಯ ಹೊರತರಲು ಯತ್ನಿಸಲಾಗಿದೆ. ಮುಖ್ಯವಾಗಿ ಎನ್ಇಪಿ-2020 ಜಾರಿಯಾದ ಬಳಿಕ ಅದರ ಉದ್ದೇಶ ಮಕ್ಕಳಲ್ಲಿ ಸ್ಕಿಲ್ ಮತ್ತು ಐಡಿಯಾಗಳನ್ನು ಪ್ರೇರೇಪಿಸುವುದೇ ಆಗಿದೆ. ಕೌಶಲ್ಯಾಧಾರಿತ ವೃತ್ತಿ ಸಂಬಂಧಿತ ವಿಷಯಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದೇ ಎನ್ಇಪಿಯ ಮೂಲ ಉದ್ದೇಶ. ಹೀಗಾಗಿ ಮಕ್ಕಳಲ್ಲಿ ಈ ಸಾಮರ್ಥ್ಯ ವೃದ್ಧಿಸಲು ನಾವು ಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ಗದಗ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಎಲ್ಲಿಲ್ಲದ ಬೇಡಿಕೆ: ಒಣಮೆಣಸಿಕಾಯಿಗೆ ಬಂತು ಬಂಗಾರದ ಬೆಲೆ

Last Updated : Jan 19, 2023, 12:45 PM IST

ABOUT THE AUTHOR

...view details