ಗಂಗಾವತಿ(ಕೊಪ್ಪಳ):ಸ್ಥಳ ನಿಯೋಜನೆ ಮಾಡದೇ ಗಂಗಾವತಿ ನಗರಸಭೆಯ ಪೌರಾಯುಕ್ತರಾಗಿದ್ದ ಶೇಖರಪ್ಪ ಈಳಿಗೇರ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಗಂಗಾವತಿ ನಗರಸಭೆ ಪೌರಾಯುಕ್ತರ ದಿಢೀರ್ ವರ್ಗಾವಣೆ - ಕೊಪ್ಪಳ ಸುದ್ದಿ
ಗಂಗಾವತಿ ನಗರಸಭೆಯ ಪೌರಾಯುಕ್ತರಾಗಿದ್ದ ಶೇಖರಪ್ಪ ಈಳಿಗೇರ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಬೆಳಗಾವಿ ಜಿಲ್ಲೆಯ ಮುಗಳಖೋಡ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಅರವಿಂದ ಜಮಖಂಡಿ ಅವರನ್ನು ನಿಯೋಜಿಸಲಾಗಿದೆ.
ಗಂಗಾವತಿ ನಗರಸಭೆಯ ಪೌರಾಯುಕ್ತರ ದಿಢೀರ್ ವರ್ಗಾವಣೆ
ಶೇಖರಪ್ಪ ಅವರ ಸ್ಥಳಕ್ಕೆ ಬೆಳಗಾವಿ ಜಿಲ್ಲೆಯ ಮುಗಳಖೋಡ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಅರವಿಂದ ಜಮಖಂಡಿ ಅವರನ್ನು ನಿಯೋಜಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ವಿಜಯಕುಮಾರ್ ಆದೇಶ ಹೊರಡಿಸಿದ್ದಾರೆ. ಜಮಖಂಡಿ ಅವರನ್ನು ತಾತ್ಕಾಲಿಕ ಹಾಗೂ ಷರತ್ತುಬದ್ದ ನಿಬಂಧನೆಗಳಿಗೊಳಪಡಿಸಿ ಗಂಗಾವತಿ ನಗರಸಭೆಗೆ ನಿಯೋಜಿಸಲಾಗಿದೆ.
ಅರವಿಂದ ಜಮಖಂಡಿ 2018ರಲ್ಲಿ ಇಕ್ಬಾಲ್ ಅನ್ಸಾರಿ ಶಾಸಕರಾಗಿದ್ದಾಗ ಕೆಲವು ದಿನಗಳ ಕಾಲ ಗಂಗಾವತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.