ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ವಿವಾಹಿತ ಮಹಿಳೆ ಮೇಲೆ ಬಲತ್ಕಾರಕ್ಕೆ ಯತ್ನ: ಕಾಮುಕ ಪರಾರಿ - ಕುಷ್ಟಗಿ ಲೇಟೆಸ್ಟ್​ ಕ್ರೈಂ ಸುದ್ದಿ

ಬಹಿರ್ದೆಸೆಗೆಂದು ತೆರಳಿದ್ದ ವಿವಾಹಿತೆಯೊಬ್ಬರ ಮೇಲೆ ಸ್ವಗ್ರಾಮದ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಕುಷ್ಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

rape attempt on married woman in kushtagi
ಬಲತ್ಕಾರಕ್ಕೆ ಯತ್ನ

By

Published : Jul 31, 2021, 10:40 AM IST

ಕುಷ್ಟಗಿ (ಕೊಪ್ಪಳ):ವಿವಾಹಿತ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ವಿವಾಹಿತ ಮಹಿಳೆ ರಾತ್ರಿ ಚಿಕ್ಕಮ್ಮನ ಮಗಳೊಂದಿಗೆ ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಅದೇ ಗ್ರಾಮದ ಹನುಮೇಶ ಹಿರೇಲಕ್ಷ್ಮಪ್ಪ ವಾಲ್ಮೀಕಿ ಎಂಬಾತ ಆಕೆಯನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಇಬ್ಬರೂ ಚೀರಾಡಿದ್ದಾರೆ. ಪತಿ ಸೇರಿದಂತೆ ಸ್ಥಳೀಯರು ಆಗಮಿಸುವಷ್ಟರಲ್ಲಿ ಹನುಮೇಶ ವಾಲ್ಮೀಕಿ ಆಕೆಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿಲಾಗಿದೆ. ನೊಂದ ಮಹಿಳೆ ನೀಡಿದ ದೂರಿನನ್ವಯ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಆರೋಪಿ ಹನುಮೇಶ ವಾಲ್ಮೀಕಿ ವಿರುದ್ಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details