ಗಂಗಾವತಿ:ಆನೆಗೊಂದಿಯ ಅರಾಧ್ಯ ದೈವ ರಂಗನಾಥ ದೇಗುಲದ ವಾರ್ಷಿಕೋತ್ಸವ ಹಾಗೂ ಜಾತ್ರೆಯ ಅಂಗವಾಗಿ ದೇಗುಲದ ಆವರಣದಲ್ಲಿ ಸರಳವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸರಳವಾಗಿ ನಡೆದ ಆನೆಗೊಂದಿ ರಂಗನಾಥ ದೇಗುಲದ ವಾರ್ಷಿಕೋತ್ಸವ - Ranganatha Temple
ಕೋವಿಡ್ ಹಿನ್ನೆಲೆ ಜನ ಸೇರದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಸಾಂಕೇತಿಕವಾಗಿ ರಂಗನಾಥ ದೇಗುಲದ ವಾರ್ಷಿಕೋತ್ಸವ ನಡೆಸಲಾಯಿತು.
ಆನೆಗೊಂದಿ ರಂಗನಾಥ ದೇಗುಲದ ವಾರ್ಷಿಕೋತ್ಸವ
ಕೋವಿಡ್ ಹಿನ್ನೆಲೆ ಜನ ಸೇರದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಸಾಂಕೇತಿಕವಾಗಿ ಧಾರ್ಮಿಕ ಸಮಾರಂಭಗಳನ್ನು ಬೆರಳೆಣಿಕೆಯಷ್ಟು ಜನರ ಮಧ್ಯೆ ಆಚರಿಸಲಾಯಿತು.
ತೇರು ಎಳೆಯಲು ಅವಕಾಶವಿಲ್ಲದಿದ್ದರಿಂದ ತೇರಿನ ಸ್ಥಳಕ್ಕೆ ತೆರಳಿದ ಅರ್ಚಕರು, ಆನೆಗೊಂದಿಯ ರಾಜಮನೆತನದ ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ದೇಗುಲದ ವಾರ್ಷಿಕೋತ್ಸವವನ್ನು ಸಂಪನ್ನಗೊಳಿಸಿದರು.