ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಆಂಜನೇಯ ಸ್ವಾಮಿ ದರ್ಶನ ಪಡೆದ ಯದುವೀರ್​​ - ಅಂಜನಾದ್ರಿ ಪರ್ವತ, ಆಂಜನೇಯ ಸ್ವಾಮಿ

ಮೈಸೂರು ಸಂಸ್ಥಾನದ ರಾಜ ಯದುವೀರ್  ಒಡೆಯರು ಅವರು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳವಾಗಿರುವ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿ ದರ್ಶನ ಪಡೆದರು

ಆಂಜನೇಯ ಸ್ವಾಮಿ

By

Published : Feb 7, 2019, 1:26 PM IST

ಕೊಪ್ಪಳ: ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರು ಅವರು ಇಂದು ಜಿಲ್ಲೆಯ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವದ ಸ್ಥಳವಾಗಿರುವ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿ ದರ್ಶನ ಪಡೆದರು.

ಸ್ಥಳೀಯ ಮುಖಂಡ ಸಂತೋಷ ಕೆಲೋಜಿ ಅವರೊಂದಿಗೆ ಅಂಜನಾದ್ರಿಗೆ ಆಗಮಿಸಿದ ಯದವೀರ್ ಅವರು ಅಂಜನಾದ್ರಿಯ ಸುಮಾರ 600 ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಆಂಜನೇಯನ ದರ್ಶನ ಪಡೆದುಕೊಂಡರು.

ಆಂಜನೇಯ ಸ್ವಾಮಿ

ಈ ಸಂದರ್ಭದಲ್ಲಿ ಮಾತನಾಡಿದ ರಾಜ ಯದುವೀರ ಒಡೆಯರ್ ಅವರು, ಅಂಜನಾದ್ರಿ ಪರ್ವತಕ್ಕೆ ಮೈಸೂರು ಸಂಸ್ಥಾನ ಪರಿವಾರದಿಂದ ಭೇಟಿ ನೀಡುತ್ತಿರುವ ಮೊದಲಿಗ ನಾನು. ಇದು ನನ್ನ ಸೌಭಾಗ್ಯ. ನಮ್ಮ ಅರಮನೆ ಬಳಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ನಾವು ಆಂಜನೇಯಸ್ವಾಮಿಯ ಭಕ್ತರು. ಅಂಜನಾದ್ರಿ ಪರ್ವತ ಆಂಜನೇಯಸ್ವಾಮಿ ಜನಿಸಿದ ಸ್ಥಳ ಎಂದು ತಿಳಿದು ಇಲ್ಲಿಗೆ ಬಂದಿದ್ದೇನೆ. ರಾಮಾಯಣ ನಮಗೆ ಮೌಲ್ಯ ಕಲಿಸುವ ಗ್ರಂಥ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಬಹುತೇಕ ಪ್ರದೇಶಗಳು ಹಂಪೆಯ ಸುತ್ತಮುತ್ತ ಕಂಡು ಬರುತ್ತವೆ.

ಇಂದು ಅಂಜನಾದ್ರಿ ಪರ್ತತಕ್ಕೆ ಬಂದು ಆಂಜನೇಯ ಸ್ವಾಮಿ ದರ್ಶನ ಪಡೆದಿರುವುದು ಇದು ನನ್ನ ಸೌಭಾಗ್ಯ ಎಂದು ರಾಜಾ ಯದುವೀರ್ ಒಡೆಯರ್ ಅವರು ಹೇಳಿದರು.

ABOUT THE AUTHOR

...view details