ಕೊಪ್ಪಳ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ವರಣ ಆರ್ಭಟಿಸಿದ್ದು, ನಿನ್ನೆ ಸಂಜೆಯೂ ಜಿಲ್ಲೆಯ ವಿವಿಧೆಡೆ ವ್ಯಾಪಕ ಮಳೆಯಾಗಿದೆ. ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು ಜಿಲ್ಲೆಯ ಕುಕನೂರು ತಾಲೂಕಿನ ಸಿದ್ನೆಕೊಪ್ಪ ಮತ್ತು ಸೋಂಪುರ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ಮಳೆ ತಂದ ಪಜೀತಿ: ಹಳ್ಳ ದಾಟಲು ಹಳ್ಳಿಗರು ಇಲ್ಲಿ ಮಾಡಲೇಬೇಕು ಹರಸಾಹಸ - undefined
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಸಿದ್ನೆಕೊಪ್ಪ ಮತ್ತು ಸೋಂಪುರ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪ್ರತಿ ಮಳೆಗಾಲದಲ್ಲೂ ಇಂತಹ ಸಮಸ್ಯೆ ಇಲ್ಲಿ ಎದುರಾಗುತ್ತದೆ. ಹೀಗಾಗಿ, ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.
![ಮಳೆ ತಂದ ಪಜೀತಿ: ಹಳ್ಳ ದಾಟಲು ಹಳ್ಳಿಗರು ಇಲ್ಲಿ ಮಾಡಲೇಬೇಕು ಹರಸಾಹಸ](https://etvbharatimages.akamaized.net/etvbharat/prod-images/768-512-3655369-thumbnail-3x2-.jpg)
ಸತತವಾಗಿ ಸುರಿದ ಮಳೆಗೆ ಹಳ್ಳ ತುಂಬಿ ನೀರು ರಸ್ತೆ ಮೆಲೆ ಹರಿದಿದೆ. ಬೆಳಗ್ಗೆ ಶಾಲೆಗೆ ಹೋಗಿದ್ದ ಗ್ರಾಮದ ವಿದ್ಯಾರ್ಥಿಗಳು ವಾಪಸ್ ಊರಿಗೆ ಬರುವಷ್ಟರಲ್ಲಿ ಹಳ್ಳ ತುಂಬಿ ನೀರು ರಸ್ತೆ ಮೇಲೆ ರಭಸವಾಗಿ ಹರಿದಿದೆ. ರಭಸವಾಗಿ ಹರಿಯುತ್ತಿದ್ದ ನೀರಿನ ಮಧ್ಯಯೇ ವಿದ್ಯಾರ್ಥಿಗಳನ್ನು ಆ ಕಡೆ ದಂಡೆಯಿಂದ ಈ ಕಡೆಗೆ ಗ್ರಾಮಸ್ಥರು ಹರಸಾಹಸಪಟ್ಟು ಕರೆತಂದಿದ್ದಾರೆ.
ಅದೃಷ್ಟವಶಾತ್ ಹಳ್ಳ ದಾಟುವಾಗ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಒಂದಿಷ್ಟು ಎಚ್ಚರ ತಪ್ಪಿದ್ದರೂ ಆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತು. ಇದು ಸಿದ್ನೇಕೊಪ್ಪ ಮತ್ತು ಸೋಂಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಪ್ರಮುಖ ರಸ್ತೆಯಾಗಿರುವುದರಿಂದ ಅನಿವಾರ್ಯವಾಗಿ ಇಲ್ಲಿನ ಗ್ರಾಮಸ್ಥರು ಇಂತಹ ದುಸ್ಸಾಹಸಕ್ಕೆ ಕೈ ಹಾಕ ಬೇಕಾಗಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಇಂತಹ ಸಮಸ್ಯೆ ಇಲ್ಲಿ ಎದುರಾಗುತ್ತದೆ. ಹೀಗಾಗಿ, ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.