ಕರ್ನಾಟಕ

karnataka

ETV Bharat / state

ಕುಷ್ಟಗಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ : ಅಪಾರ ಪ್ರಮಾಣದ ಬೆಳೆ ಹಾನಿ - ಕುಷ್ಟಗಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಕೊಯ್ಲಿಗೆ ಬಂದಿದ್ದ ದಾಳಿಂಬೆ, ಮಾವು, ಪಪ್ಪಾಯಿ ಸೇರಿದಂತೆ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆ ನಷ್ಟ ಸಂಭವಿಸಿದೆ.

Rain at Kushtagi of Haveri
ಕುಷ್ಟಗಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ

By

Published : May 4, 2020, 1:49 PM IST

ಕುಷ್ಟಗಿ :ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧೆಡೆ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು, ರೈತರಿಗೆ ಅಪಾರ ನಷ್ಟ ಸಂಭವಿಸಿದೆ.

ತಾಲೂಕಿನ ನಿಡಶೇಸಿ ಸೀಮಾದ ಮಲ್ಲಣ್ಣ ತಾಳದ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಮಾವು ಮತ್ತು ದಾಳಿಂಬೆ ಗಿಡಗಳು ಗಾಳಿಯ ರಭಸಕ್ಕೆ ಸಿಕ್ಕು ಮುರಿದು ಬಿದ್ದಿದ್ದು, ಕೊಯ್ಲಿಗೆ ಬಂದಿದ್ದ ಹಣ್ಣುಗಳು ಮಣ್ಣು ಪಾಲಾಗಿವೆ. ಹುಚನೂರು ಗ್ರಾಮದ ನೂರುಂದಪ್ಪ ಸಿಂಗಾಡಿ, ಲಕ್ಷ್ಮಿಬಾಯಿ ಸಂಗಪ್ಪ ಎಂಬವರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಮಳೆಯಿಂದ ಹಾಳಾಗಿವೆ.

ಕಳೆದ ಒಂದು ವಾರದಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ದಾಳಿಂಬೆ, ಮಾವು, ಪಪ್ಪಾಯಿ ಸೇರಿದಂತೆ ಕೊಯ್ಲಿಗೆ ಬಂದಿದ್ದ ಬೆಳೆಗಳು ನಾಶವಾಗಿದೆ.

ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ.ರಮೇಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂದಾಜು 4 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ.

ABOUT THE AUTHOR

...view details