ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಒಂದು ಶಕ್ತಿ, ಅವರಿಗಾಗಿ ನನ್ನ ಕ್ಷೇತ್ರ ಬಿಟ್ಟು ಕೊಡುವೆ : ರಾಘವೇಂದ್ರ ಹಿಟ್ನಾಳ್ - ಸಿಎಂ ಬದಲಾವಣೆ

ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂಬುದು ಮಾಧ್ಯಮಗಳ ಸೃಷ್ಟಿ. ಅವರನ್ನು ನಿಲ್ಲಿಸಬೇಕೆಂಬುದಕ್ಕಾಗಿ ಅವರ ಬೆಂಬಲಿಗರಲ್ಲಿ ಜಟಾಪಟಿ ಇದೆ..

raghavendra-hitnal
ರಾಘವೇಂದ್ರ ಹಿಟ್ನಾಳ್

By

Published : Dec 10, 2021, 4:21 PM IST

ಕೊಪ್ಪಳ :ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲ್ಲುತ್ತಾರೆ. ಅವರು ಸಿಎಂ ಆಗಿದ್ದಾಗ ನೀಡಿದ ಉತ್ತಮ ಆಡಳಿತವೇ ಇದಕ್ಕೆ ಕಾರಣ. ಸಿದ್ದರಾಮಯ್ಯನವರು ಬರುವುದಾದರೆ ಸಂತೋಷದಿಂದ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿಯಲ್ಲಿ ಸ್ಪರ್ಧೆಗೆ ಚಿಮ್ಮನಕಟ್ಟಿ‌ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಆಪ್ತ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಅವರ ಕೆಲಸ ತಲುಪಿದೆ.

2018ರಲ್ಲಿ ಕೊಪ್ಪಳ, ಕುಷ್ಟಗಿಯಲ್ಲಿ ಸ್ಪರ್ಧೆ ಮಾಡುವಂತೆ ನಾನೇ ಕೇಳಿಕೊಂಡಿದ್ದೆ. ಇಡೀ ಬದಾಮಿ ಜನರು ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ ಮಾಡಿದ್ದರು. ಕೊಪ್ಪಳ ಬಿಟ್ಟು ಕೊಡುವುದು ಅಷ್ಟೇ ಅಲ್ಲ, ಅತ್ಯಂತ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ. ನಾನು ಸಂತೋಷದಿಂದ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದರು.

ಸಿದ್ದರಾಮಯ್ಯ ಒಂದು ಶಕ್ತಿ : ಹೆಬ್ಬಾಳಕ್ಕೆ ಬನ್ನಿ ಅಂತಿದ್ದಾರೆ‌, ಜಮೀರ್ ಅಹ್ಮದ್ ಕೂಡ ಬೇಡಿಕೆ ಇಟ್ಟಿದ್ದಾರೆ‌. ಅವರೊಂದು ಶಕ್ತಿ. ಅವರು ಸ್ಪರ್ಧೆ ಮಾಡುವ ಭಾಗದಲ್ಲಿ ಅಭಿವೃದ್ಧಿ ಆಗುತ್ತದೆ. ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂಬುದು ಮಾಧ್ಯಮಗಳ ಸೃಷ್ಟಿ. ಅವರನ್ನು ನಿಲ್ಲಿಸಬೇಕೆಂಬುದಕ್ಕಾಗಿ ಅವರ ಬೆಂಬಲಿಗರಲ್ಲಿ ಜಟಾಪಟಿ ಇದೆ ಎಂದು ಹೇಳಿದರು.

ಇನ್ನು ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಇಬ್ಬರು, ಮೂವರು ಸಿಎಂ ಆಗಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ, ಸಮಸ್ಯೆ ಇದೆ. ಇವರು ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದರು.

ಅಲ್ಲದೆ ರಾಯಚೂರು, ಕೊಪ್ಪಳ ಕ್ಷೇತ್ರದ ವಿಧಾನ ಪರಿಷತ್​ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

ABOUT THE AUTHOR

...view details