ಕರ್ನಾಟಕ

karnataka

ETV Bharat / state

ಕಾಮ ದಹನ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ: 9 ಮಂದಿಗೆ ಗಾಯ - quearrel between two communities in guladalli village

ಕಾಮ ದಹನ ನೋಡಲು ಬಂದಿದ್ದ ಬೇರೆ ಗುಂಪಿನ ಬಾಲಕನ ಮೇಲೆ ಮತ್ತೊಂದು ಗುಂಪಿನ ವ್ಯಕ್ತಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗಲಾಟೆ‌ ನಡೆದು, ಒಂಭತ್ತು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನಡೆದಿದೆ.

quearrel between two communities
ಗಲಾಟೆ

By

Published : Mar 10, 2020, 9:40 AM IST

ಕೊಪ್ಪಳ:ಕಾಮ ದಹನದ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಒಂಭತ್ತು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನಡೆದಿದೆ.

ಹೋಳಿ ಹಿನ್ನೆಲೆ ತಡರಾತ್ರಿ ಕಾಮ ದಹನ ಮಾಡುವ ವೇಳೆ ಈ ಘಟನೆ ನಡೆದಿದೆ. ಕಾಮ ದಹನ ನೋಡಲು ಬಂದಿದ್ದ ಬೇರೆ ಗುಂಪಿನ ಬಾಲಕನ ಮೇಲೆ ಮತ್ತೊಂದು ಗುಂಪಿನ ವ್ಯಕ್ತಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗಲಾಟೆ‌ ನಡೆದಿದೆ ಎನ್ನಲಾಗಿದೆ.

ಕಾಮ ದಹನ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ

ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಂದಿಗಾಲಪ್ಪ ಹೊಳೆಯಾಚೆ ಎಂಬ ವ್ಯಕ್ತಿ ಹಾಗೂ ಆತನ ಮನೆಯವರು ಬಡಿಗೆ, ಕಲ್ಲಿನಿಂದ‌ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಪಂ ಅಧ್ಯಕ್ಷ ಅಂದಿಗಾಲಪ್ಪನ ಮನೆ ಬಳಿ ಕಾಮ ದಹನ ಮಾಡಲಾಗುತ್ತಿತ್ತು. ಕಾಮಣ್ಣನನ್ನು ನೋಡಲು ಬಾಲಕ ಗದ್ದೆಪ್ಪ ಅಲ್ಲಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಬಾಲಕನ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಪಂ ಅಧ್ಯಕ್ಷನ ಕುಟುಂಬ ಹಲ್ಲೆ ಮಾಡಿದೆ ಎಂದು ದೂರಲಾಗಿದೆ.

ಘಟನೆಯಲ್ಲಿ ಒಂಭತ್ತು ಜನರಿಗೆ ಗಾಯಗಳಾಗಿವೆ. ಘಟನೆ ಹಿನ್ನೆಲೆಯಲ್ಲಿ ಗುಳದಳ್ಳಿ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details