ಕುಷ್ಟಗಿ (ಕೊಪ್ಪಳ):ವಾರದ ಹಿಂದೆ ಗಂಗಾವತಿ ಸಮೀಪದ ಕಂಪ್ಲಿಗೆ ಕೊರೊನಾ ಸೋಂಕಿತನೊಬ್ಬ ಬೆಂಗಳೂರಿನಿಂದ ಬಸ್ನಲ್ಲಿ ಬಂದಿದ್ದು, ಆದೇ ಬಸ್ನಲ್ಲಿ ಇದ್ದ 27 ಜನರ ಪೈಕಿ ಸಿಂಧನೂರು ಪಟ್ಟಣದ ವ್ಯಕ್ತಿಯೊಬ್ಬ ಇದ್ದದ್ದು ಗೊತ್ತಾಗಿದೆ.
ತಾವರಗೇರಾದಲ್ಲಿ ಇರುವ ಆತನ ಸಹೋದರಿಯ ಮನೆಗೆ ಬಂದು, ಆ ದಿನ ಅಲ್ಲಿಯೇ ಇದ್ದು, ಮರುದಿನ ಸಿಂಧನೂರಿಗೆ ಹೋಗಿದ್ದಾನೆ.
ಮನೆಗೆ ಭೇಟಿ ನೀಡಿದ ಅಧಿಕಾರಿಗಳು ನಿನ್ನೆ ಸಂಜೆ ಸಿಂಧನೂರಿನ ವ್ಯಕ್ತಿ ಬಂದು ಹೋದ ಮನೆಗೆ ಪೊಲೀಸರು, ಆರೋಗ್ಯ ಇಲಾಖೆಯವರು ಬಂದು, ಮನೆಯಲ್ಲಿರುವ 9 ಜನರನ್ನು ಕ್ವಾರಂಟೈನ್ ಮಾಡಿದ್ದು, ಮನೆ ಬಿಟ್ಟು ಹೊರಗಡೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಬಸವಣ್ಣ ಕ್ಯಾಂಪ್ನಲ್ಲಿರುವ ಈ ಮನೆಯ ಹತ್ತಿರ ಯಾರೂ ಹೋಗಬಾರದು ಎಂದು ಅಕ್ಕ-ಪಕ್ಕದ ಮನೆಯವರಿಗೆಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ.
ಕ್ವಾರಂಟೈನ್ಗೆ ಒಳಗಾದ ಮನೆಯಲ್ಲಿರುವ ಈ ಕುಂಟುಂಬದ ಸದಸ್ಯರಿಗೆ ಊಟ, ನೀರು ಸರಬರಾಜು ಮಾಡವಂತೆ ಪಂಚಾಯತ್ಗೆ ತಾಲೂಕಾ ಆಡಳಿತ ತಿಳಿಸಿದೆ.