ಕೊಪ್ಪಳ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕಟ್ಟಡ ಕಾರ್ಮಿಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ.
ಕಂಪ್ಲಿಯ ಕಟ್ಟಡ ಕಾರ್ಮಿಕನ ಪ್ರಾಥಮಿಕ ಸಂಪರ್ಕದಲ್ಲಿದ್ದ 36 ಜನ ಕ್ವಾರಂಟೈನ್
ಸೋಂಕು ದೃಢಪಟ್ಟಿದೆ ಎನ್ನಲಾದ ಕಂಪ್ಲಿಯ ಕಟ್ಟಡ ಕಾರ್ಮಿಕನೊಂದಿಗೆ ಗಂಗಾವತಿಯ ಒಟ್ಟು 36 ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಂದು ಗುರುತಿಸಲಾಗಿದೆ.
ಪ್ರಕರಣ ಕುರಿತಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮಾಹಿತಿ ನೀಡಿದ್ದು, ಸೋಂಕು ದೃಢಪಟ್ಟಿದೆ ಎನ್ನಲಾದ ಕಂಪ್ಲಿಯ ಕಟ್ಟಡ ಕಾರ್ಮಿಕನೊಂದಿಗೆ ಗಂಗಾವತಿಯ ಒಟ್ಟು 36 ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಂದು ಗುರುತಿಸಲಾಗಿದೆ. ಈ ಪೈಕಿ 27 ಜನ ಬಸ್ ಪ್ರಯಾಣಿಕರು, ಬಸ್ ಚಾಲಕ, ಆಟೋ ಚಾಲಕರನ್ನು ಸ್ಕ್ರೀನಿಂಗ್ ಮಾಡಿರುವ 7 ಜನ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದಾರೆ.
ಇವರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಇನ್ನು ದ್ವಿತೀಯ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವ್ಯಕ್ತಿ ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಬಸ್ನಲ್ಲಿ ಬಂದಿದ್ದಾನೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮಾಹಿತಿ ನೀಡಿದ್ದಾರೆ.
TAGGED:
koppala corona case