ಕುಷ್ಟಗಿ (ಕೊಪ್ಪಳ): ತಾಲೂಕಿನ ಕಡೇಕೊಪ್ಪ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ನೀರು ಕಹಿಯಾಗಿದ್ದು, ಇಲ್ಲಿನ ಜನ ಈ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದಲ್ಲಿ ನಿತ್ಯವೂ ಈ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಬಳಸಲಾಗುತ್ತಿತ್ತು. ಆದರೀಗ ಕ್ರಮೇಣ ಈ ನೀರು ಕಹಿಯಾಗಿದೆ. ಅಲ್ಲದೇ ಈ ನೀರನ್ನು ಕುಡಿದರೆ ಗಂಟಲು ನೋವು ಬರುತ್ತಿರುವುದು ತಿಳಿದಿದ್ದು, ಹೀಗಾಗಿ ಈ ಗ್ರಾಮದ ಜನರು ಈ ನೀರಿನ ಬದಲಿಗೆ ಗ್ರಾಮ ಪಂಚಾಯಿತಿ ಪೂರೈಸಿದ ನೀರನ್ನೇ ಬಳಸುತ್ತಿದ್ದಾರೆ. ಶುದ್ಧ ನೀರಿನ ಘಟಕದಲ್ಲಿ ಈ ಪರಿಸ್ಥಿತಿಯಿಂದಾಗಿ ಪರ್ಯಾಯವಾಗಿ ಶುದ್ಧ ನೀರನ್ನು ದೋಟಿಹಾಳದಿಂದ ತಂದು ಕುಡಿಯುವ ನೀರಿನ ದಾಹ ನೀಗಿಸುತ್ತಿದ್ದಾರೆ.