ಕೊಪ್ಪಳ: ಪುನೀತ್ ರಾಜ್ಕುಮಾರ್ ಅವರ ನೆನಪು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಪ್ಪು ನಮನ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದು, ಅಭಿಮಾನಿಗಳು ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲೋರ್ವ ಅಭಿಮಾನಿ ತನ್ನ ಲಗ್ನ ಪತ್ರಿಕೆಯಲ್ಲಿ ಪುನೀತ್ ರಾಜ್ಕುಮಾರ್ ಚಿತ್ರ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದ ಹಿರೇಬಂಡಿಹಾಳ ಕುಟುಂಬದವರು ತಮ್ಮ ಮನೆಯ ಮಗ ಫಕೀರಪ್ಪ ಅವರಿಗೆ ಹನುಮವ್ವ ಅವರ ಜೊತೆ ಮದುವೆ ನಿಶ್ಚಯಿಸಿದ್ದಾರೆ. ಇದೇ ಡಿಸೆಂಬರ್ 27 ರಂದು ನಡೆಯಲಿರುವ ಈ ಮದುವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ ಹಾಕಿಸಿದ್ದಾರೆ. ಒಂದೆಡೆ ಕೊಪ್ಪಳ ಗವಿಮಠ ಸ್ವಾಮೀಜಿಗಳ ಫೋಟೋ ಹಾಗೂ ಇನ್ನೊಂದು ಭಾಗದಲ್ಲಿ ಪುನೀತ್ ಫೋಟೋ ಹಾಕಿಸಿದ್ದಾರೆ.