ಕುಷ್ಟಗಿ (ಕೊಪ್ಪಳ): ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯ ಮಾಡಿದರೆ ಮುಗಿಯಿತು ಕಥೆ ಎಂದು ಪಿಎಸೈ ಚಿತ್ತರಂಜನ್ ನಾಯಕ್ ಜನರಲ್ಲಿ ಜಾಗೃತಿ ಮೂಡಿಸಿದರು.
ತಾಲೂಕಿನ ಕೊರೊನಾ ಸೋಂಕಿತ ವ್ಯಕ್ತಿ ಜೊತೆ 9 ಜನ ಸಂತ ಶಿಶುನಾಳ ಷರೀಫ ಕಾಲೋನಿಯ ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ ಹಿನ್ನೆಲೆಯಲ್ಲಿ ಕಾಲೋನಿಯ ಜನರಿಗೆ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ನಿರ್ಲಕ್ಷ್ಯದಿಂದ ತಂದೆ, ತಾಯಿ ಹಾಗೂ ಮಕ್ಕಳಿಗೆ ಕೊರೊನಾ ವೈರಸ್ ರೋಗ ಅಂಟಿಸಿದ ಪಾಪಕ್ಕೆ ಗುರಿಯಾಗಿರುವಿರಿ ಎಂದರು.