ಕೊಪ್ಪಳ: ಜಮೀನು ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಜಿಲ್ಲೆಯ ಯಲಬುರ್ಗಾ ತಹಸೀಲ್ದಾರ ಕಚೇರಿ ಮುಂದೆ ಚಲವಾದಿ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಮೀನು ದಾಖಲೆಗಳನ್ನು ಸರಿಪಡಿಸುವಂತೆ ಚಲವಾದಿ ಮಹಾಸಭಾ ಪ್ರತಿಭಟನೆ - ಚಲವಾದಿ ಮಹಾಸಭಾ ಪ್ರತಿಭಟನೆ
ಜಮೀನು ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಹಸೀಲ್ದಾರ ಕಚೇರಿ ಮುಂದೆ ಚಲವಾದಿ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಯಲಬುರ್ಗಾ ಪಟ್ಟಣದ ಸರ್ವೆ ನಂಬರ್ 226, 227, 228, 229 ರಲ್ಲಿ ಚಲವಾದಿ ಸಮುದಾಯದ ಜನರ ಭೂಮಿ ಇದೆ. ಈ ಸರ್ವೆ ನಂಬರ್ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ಸರಿಪಡಿಸಿಕೊಡುವಂತೆ ಸಂಬಂಧಿಸಿದ ಜನರು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.
ಈ ಜಮೀನುಗಳಲ್ಲಿ ರೈಲ್ವೆ ನಿಲ್ದಾಣ, ರಸ್ತೆ ನಿರ್ಮಾಣವಾಗಲಿದೆ. ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಈಗಾಗಲೇ ನೋಟಿಸ್ ಸಹ ನೀಡಿದ್ದಾರೆ. ನೀಡಿರುವ ನೋಟಿಸ್ ಪ್ರಕಾರ ಇರುವ ಜಮೀನುಗಳು ಬೇರೆ ಇದ್ದು, ಸ್ಥಾನಿಕ ಜಮೀನುಗಳು ಬೇರೆ ಇವೆ. ಹೀಗಾಗಿ, ನಿಜವಾದ ಜಮೀನುದಾರರಿಗೆ ಸರಿಯಾದ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.