ಕೊಪ್ಪಳ :ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50 ಚತುಷ್ಪಥ ರಸ್ತೆಯಲ್ಲಿರುವ ಟೋಲ್ಗೇಟ್ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಟೋಲ್ಗೇಟ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ತಾಲೂಕಿನ ಹಿಟ್ನಾಳ್ ಹಾಗೂ ಶಹಪೂರ ಬಳಿ ಇರುವ ಟೋಲ್ಗೇಟ್ಗಳನ್ನ ಬಂದ್ ಮಾಡಿ ಜಿಎಂಆರ್ ಕಂಪನಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಯುತ್ತಿದೆ.
ಟೋಲ್ ಗೆಟ್ ನಲ್ಲಿ ಸ್ಥಳೀಯರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಟೋಲ್ಗೇಟ್ಗಳಲ್ಲಿ ಸ್ಥಳೀಯರನ್ನ ಏಕಾಏಕಿ ಕೆಲಸದಿಂದ ತಗೆದು ಹಾಕಿದ್ದನ್ನು ಖಂಡಿಸಿ ಮತ್ತು ಉದ್ಯೋಗ ನೀಡುವಂತೆ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ನಿನ್ನೆ ಕುಷ್ಟಗಿ ತಾಲೂಕಿನಲ್ಲಿ ಟೋಲ್ಗೇಟ್ ಬಳಿ ಪ್ರತಿಭಟನೆ ನಡೆದಿತ್ತು. ಇಂದು ಕೊಪ್ಪಳ ತಾಲೂಕಿನ ಹಿಟ್ನಾಳ್ ಹಾಗೂ ಶಹಪುರ ಬಳಿಯ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ಮುಂದುವರೆದಿದೆ.
ಸ್ಥಳೀಯರನ್ನು ಕೆಲಸದಿಂದ ಏಕಾಏಕಿ ತೆಗೆದು ಹಾಕಿರುವ ಕುರಿತಂತೆ ಮತ್ತು ಈಗ ಉದ್ಭವವಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಜಿಎಂಆರ್ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ನಿನ್ನೆ ಜಿಎಂಆರ್ ಕಂಪನಿ ಸಭೆಗೆ ಗೈರಾಗಿತ್ತು. ಇಂದು ಸಭೆಯ ಬಳಿಕ ಯಾವ ತೀರ್ಮಾನ ಹೊರಬೀಳುತ್ತೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.