ಗಂಗಾವತಿ(ಕೊಪ್ಪಳ): ಕಳೆದ ಹಲವು ವರ್ಷದಿಂದ ವಾಸವಾಗಿದ್ದರೂ ಕಾರಣವಿಲ್ಲದೇ ಒಕ್ಕಲೆಬ್ಬಿಸಲಾಗಿದೆ ಎಂದು ಆರೋಪಿಸಿ ನೂರಾರು ಮಹಿಳೆಯರು ನಗರಸಭೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.
ಒಕ್ಕಲೆಬ್ಬಿಸಿದವರಿಗೆ ಆಶ್ರಯ ಕೊಡಿ; ಮಹಿಳೆಯರಿಂದ ನಗರಸಭೆ ಆವರಣದಲ್ಲಿ ಪ್ರತಿಭಟನೆ - ನಗರಸಭೆಯ ಆವರಣಕ್ಕೆ ನುಗ್ಗಿ ಪ್ರತಿಭಟಸಿದ ಮಹಿಳೆಯರು
ನಗರಸಭೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಕಳೆದ ಎರಡು ದಶಕದಿಂದ ಸಮದ್ ಸಾಬ್ ಲೇಔಟ್ ನಲ್ಲಿ ಮನೆ ಮಾಡಿಕೊಂಡು ನೂರಾರು ಕುಟುಂಬ ವಾಸಿಸುತ್ತಿದ್ದವು. ಆದರೆ ನಗರಸಭೆಯ ಸಿಬ್ಬಂದಿಗಳು ಪೌರಾಯುಕ್ತ ಶೇಖರಪ್ಪ ಈಳಿಗೇರ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಇತ್ತೀಚೆಗೆ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಂದ ನಗರಸಭೆ ಆವರಣದಲ್ಲಿ ಪ್ರತಿಭಟನೆ
ನಗರಸಭೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಕಳೆದ ಎರಡು ದಶಕದಿಂದ ಸಮದ್ ಸಾಬ್ ಲೇಔಟ್ ನಲ್ಲಿ ಮನೆ ಮಾಡಿಕೊಂಡು ನೂರಾರು ಕುಟುಂಬ ವಾಸಿಸುತ್ತಿದ್ದವು. ಆದರೆ ನಗರಸಭೆಯ ಸಿಬ್ಬಂದಿಗಳು ಪೌರಾಯುಕ್ತ ಶೇಖರಪ್ಪ ಈಳಿಗೇರ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಇತ್ತೀಚೆಗೆ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರಾಶ್ರಿತರಿಗೆ ಆಟೋ ನಗರದಲ್ಲಿ ನಿವೇಶನ ತೋರಿಸಲಾಗಿದೆ. ಆದ್ರೆ ಅಲ್ಲಿ ವಾಸ ಯೋಗ್ಯವಾಗಿಲ್ಲ ಎಂದು ಧರಣಿ ನಿರತ ಸಂತ್ರಸ್ತರು ಅಳಲು ತೋಡಿಕೊಂಡರು.