ಗಂಗಾವತಿ: ಕೊರೊನಾ ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಸರ್ಕಾರ ತನ್ನ ನೌಕರರಿಂದ ಹಾಗೂ ನಾನಾ ವಲಯದ ಸೇವಕರಿಂದ 8 ಗಂಟೆಯ ಬದಲಿಗೆ 12 ಗಂಟೆ ಕೆಲಸ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಮನೆಯಿಂದಲೇ ನೌಕರರು ಪ್ರತಿಭಟನೆ ನಡೆಸಿದರು.
ಕೆಲಸದ ಅವಧಿ ಹೆಚ್ಚಳ ವಿರೋಧಿಸಿ ಮನೆಯಿಂದಲೇ ಪ್ರತಿಭಟನೆ - Koppal news
ಸರ್ಕಾರ ತನ್ನ ನೌಕರರಿಂದ ಹಾಗೂ ನಾನಾ ವಲಯದ ಸೇವಕರಿಂದ 8 ಗಂಟೆಯ ಬದಲಿಗೆ 12 ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದರು.
ಕೆಲಸದ ಅವಧಿ ಹೆಚ್ಚಳಕ್ಕೆ ಮನೆಯಿಂದಲೇ ಪ್ರತಿಭಟನೆ
ಸಿಐಟಿಯು ಸಂಘಟನೆಯ ರಾಷ್ಟ್ರವ್ಯಾಪಿ ಕರೆ ಮೇರೆಗೆ ನಗರದಲ್ಲಿ ಕೆಲ ಶಿಕ್ಷಕರು, ಶ್ರಮಿಕರು, ನೌಕರರು ಮನೆಯಿಂದ ಹೊರ ಬಂದು ಫಲಕ ಹಿಡಿದು ಮೌನ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಸಂಘಟನೆಯ ಪ್ರಮುಖರು ಇಲ್ಲಿನ ಶ್ರೀರಾಮ ಮಂದಿರದ ಹಿಂದಿರುವ ಕಚೇರಿ ಹಾಗೂ ಕೆಲ ಮುಖಂಡರು ಎಪಿಎಂಸಿ ಆವರಣದಲ್ಲಿರುವ ಶ್ರಮಿಕರ ಕಾಲೋನಿಯಲ್ಲಿ ಹಮಾಲರೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಯತ್ನ ನಡೆಸಿದರು.