ಕರ್ನಾಟಕ

karnataka

ETV Bharat / state

ಕೊಪ್ಪಳ: ಚೀನಾ ವಿರುದ್ಧ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ... - ಚೀನಾ ವಿರುದ್ಧ ಪ್ರತಿಭಟನೆ

ಚೀನಾ ಕುತಂತ್ರದ ವಿರುದ್ಧ ಧಿಕ್ಕಾರ ಎಂದು ರಣಹೇಡಿ ಚೀನಾ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.

Protest against China
ಚೀನಾ ವಿರುದ್ಧ ಪ್ರತಿಭಟನೆ

By

Published : Jun 17, 2020, 3:34 PM IST

ಕೊಪ್ಪಳ :ಚೀನಾದ ಕುತಂತ್ರದಿಂದ ಚೀನಾ ಸೈನಿಕರು‌ ನಡೆಸಿದ ಭಾರತೀಯ ಯೋಧರ ಹತ್ಯೆಗೆ ಜಿಲ್ಲೆಯಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಗರದಲ್ಲಿ ಬಿಜೆಪಿ‌ ಮಹಿಳಾ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತ್ಯೇಕವಾಗಿ ನಗರದ ಅಶೋಕ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಚೀನಾ ಕುತಂತ್ರದ ವಿರುದ್ಧ ಧಿಕ್ಕಾರ..

ಚೀನಾ ವಸ್ತುಗಳನ್ನು ದಹಿಸುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಚೀನಾ ಕುತಂತ್ರದ ವಿರುದ್ಧ ಧಿಕ್ಕಾರ ಎಂದು ರಣಹೇಡಿ ಚೀನಾ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.

ಕುತಂತ್ರಿ ಚೀನಾದಿಂದ ಉಂಟಾದ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರ ಹಿಡಿದು ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ‌ ನಡೆಸುವ ಮೂಲಕ ಗೌರವ ಸಲ್ಲಿಸಿದರು.

ABOUT THE AUTHOR

...view details