ಗಂಗಾವತಿ: ನಗರದ ಜನವಸತಿ ಪ್ರದೇಶದ ಉಪ್ಪಾರ ಓಣಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಯುವತಿವೋರ್ವಳನ್ನು ರಕ್ಷಿಸಿದ್ದಾರೆ.
ಗಂಗಾವತಿಯ ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಆರೋಪ: ಪೊಲೀಸರಿಂದ ಯುವತಿಯ ರಕ್ಷಣೆ - Gangavathi
ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ ಎಂಬ ಸಂಶಯದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಯುವತಿವೋರ್ವಳನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆಗೆ ಪ್ರೇರೇಪಿಸುತ್ತಿದ್ದ ಇಬ್ಬರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೈಲಾಪುರದ ಸತೀಶ್ ಅಬ್ಬಿಗೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ವಿಜಯಕುಮಾರ್ ಎಂಬ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಮಾಗಡಿ ಮೂಲದ 23 ವರ್ಷ ವಯಸ್ಸಿನ ಯುವತಿಯನ್ನು ರಕ್ಷಿಸಿದ ಪೊಲೀಸರು, ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಮನೆ ವಾಸಕ್ಕೆಂದು ಬಾಡಿಗೆ ಪಡೆದಿದ್ದ ಇಬ್ಬರು, ವೇಶ್ಯಾವಾಟಿಕೆಗೆ ಅನ್ಯ ಜಿಲ್ಲೆಯಿಂದ ಯುವತಿಯರನ್ನು ಕರೆತರುತ್ತಿದ್ದರು ಎನ್ನಲಾಗ್ತಿದೆ. ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.